ADVERTISEMENT

ಹೊಸೂರು: 100ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಸೆಪ್ಟಿಕ್‌ ಟ್ಯಾಂಕ್‌ನಿಂದ ಅನಿಲ ಸೋರಿಕೆ ಶಂಕೆ

ಪಿಟಿಐ
Published 14 ಅಕ್ಟೋಬರ್ 2022, 18:09 IST
Last Updated 14 ಅಕ್ಟೋಬರ್ 2022, 18:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೃಷ್ಣಗಿರಿ: ಜಿಲ್ಲೆಯ ಹೊಸೂರಿನಲ್ಲಿರುವ ಪಾಲಿಕೆಯ ಮಾಧ್ಯಮಿಕ ಶಾಲೆಯ 100ಕ್ಕೂ ಅಧಿಕ ಮಕ್ಕಳು ಶುಕ್ರವಾರ ಅಸ್ವಸ್ಥಗೊಂಡಿದ್ದಾರೆ. ಶಾಲೆಯ ಆವರಣದಲ್ಲಿನ ಸೆಪ್ಟಿಕ್‌ ಟ್ಯಾಂಕ್‌ನಿಂದ ಅನಿಲ ಸೋರಿಕೆಯಾಗಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

‘ತರಗತಿಯಲ್ಲಿದ್ದಾಗ ಕೆಲ ಮಕ್ಕಳಲ್ಲಿ ವಾಕರಿಕೆ ಕಂಡುಬಂದರೆ, ಕೆಲವರು ವಾಂತಿ ಮಾಡಿಕೊಂಡರು. ಇವರ ಪೈಕಿ 67 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಜಯಚಂದ್ರ ಭಾನು ರೆಡ್ಡಿ ಅವರು ಶಾಲೆ ಹಾಗೂ ಆಸ್ಪತ್ರೆಗೆ ಭೇಟಿ, ಮಕ್ಕಳ ಆರೋಗ್ಯ ವಿಚಾರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.