ADVERTISEMENT

ಆರೋಪಿಗೆ ಗುಂಡು ಹಾರಿಸಿದ ಭಾರತ ಮೂಲದ ಅಧಿಕಾರಿ: ಶ್ಲಾಘನೆ

ಪಿಟಿಐ
Published 24 ಜನವರಿ 2022, 11:10 IST
Last Updated 24 ಜನವರಿ 2022, 11:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನ್ಯೂಯಾರ್ಕ್‌ (ಪಿಟಿಐ): ನ್ಯೂಯಾರ್ಕ್‌ ನಗರದ ಹಾರ್ಲೆಮ್‌ ಪ್ರದೇಶದಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಕರೆ ಬಗ್ಗೆ ತನಿಖೆ ನಡೆಸುವಾಗ ತನ್ನ ಸಹೋದ್ಯೋಗಿಯನ್ನು ಕೊಂದು ಮತ್ತೊಬ್ಬ ಸಹೋದ್ಯೋಗಿಯನ್ನು ಗಂಭೀರ ಗಾಯಗೊಳಿಸಿದ ವ್ಯಕ್ತಿಗೆ ಭಾರತೀಯ ಮೂಲದ 27 ವರ್ಷದ ಅಧಿಕಾರಿಯು ಗುಂಡು ಹಾರಿಸಿದ್ದಾರೆ. ಅಧಿಕಾರಿಯ ಕಾರ್ಯಕ್ಕೆ ಈಗ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪೊಲೀಸರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯು ಈಗ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶುಕ್ರವಾರ ನಡೆದ ಈ ಘಟನೆಯಿಂದ ಭಾರತೀಯ ಮೂಲದ ಪೊಲೀಸ್‌ ಅಧಿಕಾರಿ ಸುಮಿತ್‌ ಸುಲಾನ್‌ ಹೊರಬರಲು ಸಾಧ್ಯವಾಗಿಲ್ಲ. ಮಾರಣಾಂತಿಕ ದಾಳಿಯಿಂದ ನಲುಗಿದ್ದಾರೆ ಎಂದು ಅವರ ತಾಯಿಯು ನ್ಯೂಯಾರ್ಕ್‌ ಪೋಸ್ಟ್‌ ಪತ್ರಿಕೆಗೆ ಹೇಳಿದರು.

ADVERTISEMENT

ಶುಕ್ರವಾರ ಕೌಟುಂಬಿಕ ಹಿಂಸಾಚಾರ ತನಿಖೆ ನಡೆಸಲು ಸುಲಾನ್‌, ಜಾಸೊನ್‌ ರಿವರಾ ಮತ್ತು ವಿಲ್‌ಬರ್ಟ್‌ ಮೋರಾ ಎಂಬ ಪೊಲೀಸ್‌ ಅಧಿಕಾರಿಗಳನ್ನು ಹಾರ್ಲೆಮ್‌ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಹಿಂಸಾಚಾರ ನಡೆಸುತ್ತಿದ್ದ ಲಾಶಾನ್‌ ಮೆಕ್‌ನೀಲ್‌ ಗುಂಡಿನ ದಾಳಿ ನಡೆಸಿದ ವೇಳೆ ಪೊಲೀಸ್‌ ಅಧಿಕಾರಿ ರಿವರಾ ಮೃತಪಟ್ಟರು. ಅಧಿಕಾರಿ ಮೋರಾ ಅವರಿಗೆ ಗಂಭೀರ ಗಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.