ADVERTISEMENT

ಸಾರಿಡಾನ್‌ ಸೇರಿ ಮೂರು ಔಷಧಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಏಜೆನ್ಸೀಸ್
Published 17 ಸೆಪ್ಟೆಂಬರ್ 2018, 9:53 IST
Last Updated 17 ಸೆಪ್ಟೆಂಬರ್ 2018, 9:53 IST
   

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವಾರ ನಿಷೇಧಿಸಿದ್ದ 328 ಔಷಧಗಳ ಪೈಕಿ ಸಾರಿಡಾನ್‌ ಸೇರಿದಂತೆ ಮೂರು ಔಷಧಗಳನ್ನು ಮಾರಾಟ ಮಾಡಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ.

ಈ ಕುರಿತು ಔಷಧ ತಯಾರಕರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿತು.

ನಿಗದಿತ ಪ್ರಮಾಣದ ಔಷಧಗಳ ಸಂಯೋಜನೆಯ (ಎಫ್‌ಡಿಸಿ)ಯುನೋವು ನಿವಾರಕ ಔಷಧಸಾರಿಡಾನ್‌, ಸ್ಕಿನ್‌ ಕ್ರೀಮ್‌ ಸೇರಿದಂತೆ ವಿವಿಧ ಬಗೆಯ 328 ಔಷಧಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವಾರ ನಿಷೇಧಿಸಿತ್ತು.

ADVERTISEMENT

ಈ ಔಷಧಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ನಿಷೇಧ ಹೇರಲಾಗಿದೆ ಎಂದುಆರೋಗ್ಯ ಸಚಿವಾಲಯ ತಿಳಿಸಿತ್ತು.

ನಿಷೇಧಕ್ಕೆ ಸಂಬಂಧಿಸಿ ಸರ್ಕಾರ ಮತ್ತು ಔಷಧ ಕಂಪನಿಗಳ ನಡುವೆ ಎರಡು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.