
ಪ್ರಜಾವಾಣಿ ವಾರ್ತೆ
ಸುಪ್ರೀಂ ಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲರ ತಂಡದಿಂದ ಮತ್ತೊಬ್ಬ ಕನ್ನಡಿಗನನ್ನು ಕೈಬಿಡಲಾಗಿದೆ.
2023ರ ಸೆಪ್ಟೆಂಬರ್‌ನಿಂದ ಎಒಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಎಲ್.ಚಿದಾನಂದ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ. ಮೂರು ತಿಂಗಳ ಹಿಂದೆ ವಿ.ಎನ್.ರಘುಪತಿ ಅವರನ್ನು ಕೈಬಿಡಲಾಗಿತ್ತು. ಅವರು 2009ರಿಂದ ವಕೀಲರ ತಂಡದಲ್ಲಿದ್ದರು.
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರವನ್ನು ಆರು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳು ಪ‍್ರತಿನಿಧಿಸುತ್ತಿದ್ದು, ನಿಶಾಂತ್ ಪಾಟೀಲ ಬಿಟ್ಟು ಉಳಿದವರೆಲ್ಲ ಉತ್ತರ ಭಾರತದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.