ADVERTISEMENT

ಸೇನೆಯಲ್ಲಿ ಮಹಿಳೆಯರಿಗೆ ಕಮಾಂಡ್ ಹುದ್ದೆ ನೀಡಿ: ಸುಪ್ರೀಂ ಕೋರ್ಟ್‌

ಪಿಟಿಐ
Published 18 ಫೆಬ್ರುವರಿ 2020, 4:52 IST
Last Updated 18 ಫೆಬ್ರುವರಿ 2020, 4:52 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ:ಮಹಿಳೆಯರಿಗೆ ಸೇನೆಯಲ್ಲಿ ಕಮಾಂಡ್‌ ಹುದ್ದೆ ನೀಡಲು ದೈಹಿಕ ಸಾಮರ್ಥ್ಯ ಮತ್ತು ಸಾಮಾಜಿಕ ಕಾರಣಗಳು ಅಡ್ಡಿ ಎಂಬ ಕೇಂದ್ರ ಸರ್ಕಾರದ ವಾದ ಗೊಂದಲದಿಂದ ಕೂಡಿದೆ. ಮಹಿಳೆಯರಿಗೆ ಕಮಾಂಡ್ ಹುದ್ದೆ ನೀಡುವುಕ್ಕೆ ಯಾವುದೇ ತಡೆ ಇಲ್ಲ ಎಂದು ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.

‘ಈ ಹಿಂದೆ ಮಹಿಳಾ ಅಧಿಕಾರಿಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಸಶಸ್ತ್ರಪಡೆಗಳಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರದ ಕಡೆಯಿಂದ ಮನಸ್ಥಿತಿ ಬದಲಾಗಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.

ಮಹಿಳಾ ಅಧಿಕಾರಿಗಳಿಗೆಕಾಯಂ ಸೇವೆ (ಪರ್ಮನೆಂಟ್‌ ಕಮಿಷನ್‌) ಅವಕಾಶ ನೀಡುವಂತೆ 2010ರಲ್ಲಿ ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ತಡೆ ಇಲ್ಲದ ಹೊರತಾಗಿಯೂ ಅದನ್ನು ಅನುಷ್ಠಾನಕ್ಕೆ ತರುವುದನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಮಹಿಳಾ ಅಧಿಕಾರಿಗಳ ತೊಡಗಿಸಿಕೊಳ್ಳುವಿಕೆಯು ವಿಕಸನ ಪ್ರಕ್ರಿಯೆಯಾಗಿದ್ದು, ದೆಹಲಿ ಹೈಕೋರ್ಟ್‌ ತೀರ್ಪಿಗೆ ಅನುಗುಣವಾಗಿ ಸರ್ಕಾರ ನಡೆದುಕೊಳ್ಳಬೇಕಾಗಿತ್ತು ಎಂದೂ ಹೇಳಿದೆ.

ADVERTISEMENT

ಏನಿದು ಕಾಯಂ ಸೇವೆ?:ಸೇನೆಯಲ್ಲಿ ನಿವೃತ್ತಿಯಾಗುವವರೆಗೂ ಸೇವೆ ಸಲ್ಲಿಸಲು ಅವಕಾಶ ದೊರೆಯಲಿದೆ. ಅಂದರೆ, ಕಾಯಂ ಸೇವೆ (ಪರ್ಮನೆಂಟ್‌ ಕಮಿಷನ್‌) ಮೂಲಕ ಆಯ್ಕೆಯಾದರೆ ಈಗ ನಿಗದಿಪಡಿಸಿರುವ ನಿವೃತ್ತಿ ವಯಸ್ಸು 60 ವರ್ಷಗಳವರೆಗೂ ಕಾರ್ಯನಿರ್ವಹಿಸುವ ಅವಕಾಶ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.