ADVERTISEMENT

ತಿಂಗಳ ನಂತರ ಐಎನ್‌ಐ ಸಿಇಟಿ ನಡೆಸಲು ಸುಪ್ರೀಂ ಕೋರ್ಟ್ ಸೂಚನೆ

ಪಿಟಿಐ
Published 11 ಜೂನ್ 2021, 10:01 IST
Last Updated 11 ಜೂನ್ 2021, 10:01 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ‘ಐಎನ್‌ಐ ಸಿಇಟಿ’ಯನ್ನು ಜೂನ್‌ 16ರಂದು ನಿಗದಿ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಒಂದು ತಿಂಗಳ ನಂತರ ಈ ಪರೀಕ್ಷೆಯನ್ನು ನಡೆಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್‌) ಶುಕ್ರವಾರ ನಿರ್ದೇಶನ ನೀಡಿದೆ.

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ನೀಡಲು ಎಐಐಎಂಎಸ್‌ ‘ಐಎನ್‌ಐ ಸಿಇಟಿ’ ನಡೆಸುತ್ತದೆ.

ಜೂನ್‌ 16ರಂದು ಸಿಇಟಿ ನಡೆಸುವ ಸಂಬಂಧ ಎಐಐಎಂಎಸ್‌ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಕೆಲ ವೈದ್ಯರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎಂ.ಆರ್‌.ಶಾ ಅವರಿರುವ ರಜಾಕಾಲದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.

ADVERTISEMENT

‘ಕೋವಿಡ್‌–19 ಪಿಡುಗಿನ ಕಾರಣ ಅನೇಕ ವೈದ್ಯರು ಕರ್ತವ್ಯದ ಮೇಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜೂನ್‌ 16ರಂದು ಪ್ರವೇಶ ಪರೀಕ್ಷೆ ನಡೆಸಲು ಮುಂದಾಗಿರುವುದು ಸ್ವೇಚ್ಛಾಚಾರದ ಕ್ರಮ ಎನಿಸುತ್ತದೆ’ ಎಂದು ನ್ಯಾಯಪೀಠ ಹೇಳಿತು.

815 ಸ್ನಾತಕೋತ್ತರ ಸೀಟುಗಳಿದ್ದು, 80,000 ಅಭ್ಯರ್ಥಿಗಳು ಐಎನ್‌ಐ ಸಿಇಟಿಗೆ ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.