ADVERTISEMENT

ಮತ ದಾಖಲಾದ ಬಗ್ಗೆ ಮರುಪರಿಶೀಲನೆ: ಇ.ಸಿ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 23:30 IST
Last Updated 17 ಜುಲೈ 2023, 23:30 IST
ವಿಚಾರಣೆ 13 ವರ್ಷ ವಿಳಂಬ: ಕ್ಷಮೆ ಕೋರಿದ ಸುಪ್ರೀಂ ಕೋರ್ಟ್!
ವಿಚಾರಣೆ 13 ವರ್ಷ ವಿಳಂಬ: ಕ್ಷಮೆ ಕೋರಿದ ಸುಪ್ರೀಂ ಕೋರ್ಟ್!   

ನವದೆಹಲಿ: ಚಲಾಯಿಸಿದ ಮತವು ವಿದ್ಯುನ್ಮಾನ ಮತ ಯಂತ್ರದಲ್ಲಿ (ಇವಿಎಂ) ‘ದಾಖಲಾಗಿದೆ ಎಂದು ಪರಿಗಣಿಸಲ್ಪಟ್ಟಿದೆ’ ಎಂಬ ಕುರಿತು ಮರುಪರಿಶೀಲನೆ ಮಾಡಲು ಮತದಾರರಿಗೆ ಅವಕಾಶ ನೀಡುವಂತೆ ಕೋರಿ ಎನ್‌ಜಿಒ ಒಂದು ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ(ಇ.ಸಿ) ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಮೂರು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆಯೂ ಆಯೋಗಕ್ಕೆ ಕೋರ್ಟ್ ಹೇಳಿದೆ.

‘ಈ ಪ್ರಕರಣವು ಅತಿಯಾದ ಸಂದೇಹಕ್ಕೆ ಸಂಬಂಧಿಸಿದ ಪ್ರಕರಣದಂತೆ ಕಾಣುತ್ತಿದೆ ಎಂದು ನಾವು ಭಾವಿಸುತ್ತೇವೆ. ನಿರ್ದಿಷ್ಟ ವಿಷಯಗಳಲ್ಲಿ ನಾವು ಅತಿಯಾಗಿ ಸಂದೇಹ ಪಡಬೇಕಾಗುತ್ತದೆ. ಇಂತಹ ಸಂದೇಹಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇ.ಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು  ಭಾವಿಸುತ್ತೇವೆ. ಹೀಗಾಗಿ ಇ.ಸಿಗೆ ನೋಟಿಸ್‌ ನೀಡಿಲ್ಲ. ಬದಲಾಗಿ ಅರ್ಜಿಯ ಪ್ರತಿಯನ್ನು ನೀಡುವಂತೆ ಹೇಳಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಬೇಲಾ ಎಂ. ತ್ರಿವೇದಿ ಅವರಿದ್ದ ನ್ಯಾಯಪೀಠವು ಹೇಳಿತು.

ADVERTISEMENT

ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ ಎಂಬ ಎನ್‌ಜಿಒ ಈ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.