ADVERTISEMENT

ಇ–ವೋಟಿಂಗ್‌ ಸಿಂಧುತ್ವ ಎತ್ತಿ ಹಿಡಿದ ‘ಸುಪ್ರೀಂ’

ಫ್ರಾಂಕ್ಲಿನ್‌ ಟೆಂಪಲ್ಟನ್‌ ಮ್ಯೂಚುವಲ್‌ ಫಂಡ್‌ ಯೋಜನೆ ಮುಕ್ತಾಯ

ಪಿಟಿಐ
Published 12 ಫೆಬ್ರುವರಿ 2021, 16:00 IST
Last Updated 12 ಫೆಬ್ರುವರಿ 2021, 16:00 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಫ್ರಾಂಕ್ಲಿನ್‌ ಟೆಂಪಲ್ಟನ್‌ನ ಆರು ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು ಮುಕ್ತಾಯಗೊಳಿಸುವುದಕ್ಕೆ ಸಂಬಂಧಿಸಿ ನಡೆದ ಇ–ವೋಟಿಂಗ್‌ ಪ್ರಕ್ರಿಯೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಶುಕ್ರವಾರ ಎತ್ತಿ ಹಿಡಿಯಿತು.

ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಎಸ್‌.ಎ.ನಜೀರ್‌, ಸಂಜೀವ್‌ಖನ್ನಾ ಅವರಿರುವ ನ್ಯಾಯಪೀಠ, ‘ಈ ಆರು ಮ್ಯೂಚುವಲ್‌ ಫಂಡ್‌ ಯೋಜನೆಗಳ ಹೂಡಿಕೆದಾರರಿಗೆ ಹಣ ವಿತರಿಸುವ ಕಾರ್ಯವನ್ನು ಮುಂದುವರಿಸಬೇಕು’ ಎಂದು ಸೂಚಿಸಿತು.

ಇ–ವೋಟಿಂಗ್‌ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದ ಕೆಲ ಹೂಡಿಕೆದಾರರು, ಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿದಾರರ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠ, ಈ ಮೊದಲು ಕೋರ್ಟ್‌ ನೀಡಿರುವ ಆದೇಶದ ಪ್ರಕಾರವೇ ಹೂಡಿಕೆದಾರರಿಗೆ ಹಣ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.