ADVERTISEMENT

ಸುಶಾಂತ್‌ ಸಹೋದರಿಯ ಟ್ವಿಟರ್‌, ಇನ್‌ಸ್ಟಾಗ್ರಾಂ‌ ಖಾತೆ ನಿಷ್ಕ್ರಿಯ

ಪಿಟಿಐ
Published 14 ಅಕ್ಟೋಬರ್ 2020, 14:15 IST
Last Updated 14 ಅಕ್ಟೋಬರ್ 2020, 14:15 IST
ಶ್ವೇತಾ ಸಿಂಗ್‌
ಶ್ವೇತಾ ಸಿಂಗ್‌   

ಮುಂಬೈ : ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಹೋದರಿ ಶ್ವೇತಾ ಸಿಂಗ್‌ ಅವರ ಇನ್‌ಸ್ಟಾಗ್ರಾಂ‌ ಮತ್ತು ಟ್ವಿಟರ್‌ ಖಾತೆಗಳು ನಿಷ್ಕ್ರಿಯಗೊಂಡಿವೆ.

ಸಾಮಾಜಿಕ ಮಾಧ್ಯಮಗಳನ್ನು ತ್ಯಜಿಸುವ ಕುರಿತು ಶ್ವೇತಾ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ, ಅವರಾಗಿಯೇ ಈ ಖಾತೆಗಳನ್ನು ನಿಷ್ಕಿಯಗೊಳಿಸಿದ್ದಾರೆಯೇ ಎಂಬ ಖಚಿತ ಮಾಹಿತಿ ದೊರಕಿಲ್ಲ.

ಸುಶಾಂತ್‌ ಸಾವಿಗೀಡಾಗಿ ಬುಧವಾರಕ್ಕೆ ಸರಿಯಾಗಿ ನಾಲ್ಕು ತಿಂಗಳು ಕಳೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚುರುಕಾಗಿದ್ದ ಶ್ವೇತಾ ಅವರು, ಸಹೋದರನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಅಭಿಯಾನವನ್ನು ಆರಂಭಿಸಿದ್ದರು. ಇದ್ದಕ್ಕಿದ್ದಂತೆ ಅವರ ಖಾತೆಗಳು ನಿಷ್ಕಿಯಗೊಂಡಿರುವುದು ಸುಶಾಂತ್‌ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.