ADVERTISEMENT

ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್‌ ಚಂದ್ರ ನೇಮಕ

ಪಿಟಿಐ
Published 12 ಏಪ್ರಿಲ್ 2021, 15:06 IST
Last Updated 12 ಏಪ್ರಿಲ್ 2021, 15:06 IST
ಸುಶೀಲ್‌ ಚಂದ್ರ
ಸುಶೀಲ್‌ ಚಂದ್ರ   

ನವದೆಹಲಿ: ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್‌ ಚಂದ್ರ ಅವರು ನೇಮಕಗೊಂಡಿದ್ದಾರೆ ಎಂದು ಕಾನೂನು ಸಚಿವಾಲಯದ ಹೇಳಿಕೆ ತಿಳಿಸಿದೆ.

ಚಂದ್ರ ಅವರು ಮಂಗಳವಾರ (ಏ. 13) ಅಧಿಕಾರ ಸ್ವೀಕರಿಸುವರು. ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುನಿಲ್‌ ಅರೋರಾ ಅವರ ಅಧಿಕಾರವಧಿ ಸೋಮವಾರ ಅಂತ್ಯಗೊಂಡಿತು.

ಸುಶೀಲ್‌ ಚಂದ್ರ ಅವರು ಚುನಾವಣಾ ಆಯುಕ್ತರಾಗಿ ಫೆಬ್ರುವರಿ 14, 2019ರಂದು ನೇಮಕವಾಗಿದ್ದರು. ಮುಖ್ಯ ಚುನಾವಣಾ ಆಯುಕ್ತರಾಗಿ ಇವರ ಅಧಿಕಾರವಧಿಯು ಮೇ 14, 2022ರವರೆಗೂ ಇದೆ.

ADVERTISEMENT

ಚಂದ್ರ ಅವರ ನೇತೃತ್ವದಲ್ಲಿ ಆಯೋಗವು ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್‌ ರಾಜ್ಯಗಳ ಚುನಾವಣೆ ನಡೆಸಲಿದೆ. ಈ ರಾಜ್ಯಗಳಲ್ಲಿ ಸರ್ಕಾರಗಳ ಅವಧಿ ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ಅಂತ್ಯಗೊಳ್ಳಲಿವೆ. ಉತ್ತರಪ್ರದೇಶ ವಿಧಾನಸಭೆ ಅವಧಿ ಮುಂದಿನ ವರ್ಷ ಮೇ 14ರಂದು ಅಂತ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.