ADVERTISEMENT

‘ಕೌನ್ ಬನೋಗಾ ಕರೋಡ್‌ಪತಿ’ | ‘ಕೋಟಿ’ ವಿಜೇತೆ ಚುನಾವಣಾ ಪ್ರಚಾರ ರಾಯಭಾರಿ

₹ 1ಕೋಟಿ ಗೆದ್ದ ಬಬಿತಾ ತಾಡೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 19:24 IST
Last Updated 2 ಅಕ್ಟೋಬರ್ 2019, 19:24 IST
ಬಬಿತಾ ತಾಡೆ
ಬಬಿತಾ ತಾಡೆ   

ಅಮರಾವತಿ (ಮಹಾರಾಷ್ಟ್ರ, ಪಿಟಿಐ): ‘ಕೌನ್ ಬನೋಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದಲ್ಲಿ ₹ 1 ಕೋಟಿ ಗಳಿಸಿರುವ ಬಬಿತಾ ತಾಡೆ ಅವರನ್ನು ಅಮರಾವತಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದೆ.

‘ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಭಾಗವಹಿಸುವಿಕೆ (ಸ್ವೀಪ್‌) ಕಾರ್ಯಕ್ರಮದ ಮೂಲಕ ಬಬಿತಾ ಅವರು ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ’ ಎಂದು ಅಮರಾವತಿ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಮನೀಷ್ ಖತ್ರಿ ತಿಳಿಸಿದ್ದಾರೆ

‘ಮತದಾನ ರಾಷ್ಟ್ರೀಯ ಕರ್ತವ್ಯ. ಹಳ್ಳಿಗಳಲ್ಲಿರುವ ಸಮುದಾಯದೊಂದಿಗೆ ಬೆರೆತು, ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕಿನ ಚಲಾವಣೆಯ ಕುರಿತು ತಿಳಿವಳಿಕೆ ಮೂಡಿಸಲಿದ್ದೇನೆ’ಎಂದು ಬಬಿತಾ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.