ವೆಲ್ಲೂರು(ತಮಿಳುನಾಡು): ನಮ್ಮ ಭೂಮಿಗಳು ವಕ್ಫ್ ಮಂಡಳಿಗೆ ಸೇರಿವೆ ಎಂದು ಇದ್ದಕ್ಕಿದ್ದಂತೆ ನೋಟಿಸ್ ನೀಡಲಾಗಿದೆ ಎಂದು ಇಲ್ಲಿನ ಹಳ್ಳಿಗಳ ಜನರು ಹೇಳಿದ್ದಾರೆ.
ಇಲ್ಲಿನ ದರ್ಗಾ ನೋಡಿಕೊಳ್ಳುವ ಆಡಳಿತ ಮಂಡಳಿಯಿಂದ ನಮ್ಮ ಭೂಮಿಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿ ನೋಟಿಸ್ ನೀಡಿದೆ ಎಂದು ತಿಳಿಸಿದ್ದಾರೆ.
ಭೂಮಿಗೆ ಬಾಡಿಗೆ ನೀಡಿ ಇಲ್ಲವೆ ಜಾಗ ಖಾಲಿ ಮಾಡಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ವೆಲ್ಲೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ, ನ್ಯಾಯ ಒದಗಿಸುವಂತೆ ಕೋರಿರುವುದಾಗಿ ಹಳ್ಳಿಗರು ಹೆಳಿದ್ದಾರೆ.
ಸುಮಾರು 3-4 ತಲೆಮಾರುಗಳಿಂದ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ ಮತ್ತು ಈಗ ಇದ್ದಕ್ಕಿದ್ದಂತೆ ನಮಗೆ ನೋಟಿಸ್ ಬಂದಿದೆ ಎಂದು ವಿರಿನಿಚಿಪುರಂ ಬಳಿಯ ಅನೈಕಟ್ಟು ವ್ಯಾಪ್ತಿಯ ಕಾಟುಕೊಳ್ಳೈ ಗ್ರಾಮದ ನಿವಾಸಿಗಳು ಹೇಳಿದ್ದಾರೆ..
ಸುಮಾರು 150 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿದ್ದು, ಎಷ್ಟು ಜನರಿಗೆ ನೋಟಿಸ್ ಬಂದಿದೆ ಎಂಬ ಬಗ್ಗೆ ತಕ್ಷಣಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.