ADVERTISEMENT

ಕಾಶ್ಮೀರ ಗಡಿಯಲ್ಲಿ ಸೇನೆ ಗುಂಡಿಗೆ 9 ಮಂದಿ ಉಗ್ರರು ಬಲಿ

ಏಜೆನ್ಸೀಸ್
Published 5 ಏಪ್ರಿಲ್ 2020, 6:02 IST
Last Updated 5 ಏಪ್ರಿಲ್ 2020, 6:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು- ಕಾಶ್ಮೀರ: ಕಳೆದ 24 ಗಂಟೆಗಳ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ9 ಮಂದಿ ಉಗ್ರರುಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ದಕ್ಷಿಣ ಕಾಶ್ಮೀರದ ಬಟ್ಪುರದಲ್ಲಿ ಶನಿವಾರ 4 ಮಂದಿ ಉಗ್ರರು ಭಾರತೀಯ ಗಡಿ ನಿಯಂತ್ರಣ ರೇಖೆಯನ್ನುದಾಟಲು ಯತ್ನಿಸುತ್ತಿದ್ದಾಗ ಸೈನಿಕರ ಗುಂಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಕೆರೆನ್ ಸೆಕ್ಟರ್‌‌ನಲ್ಲಿ 5 ಮಂದಿ ಉಗ್ರರು ಒಳಬರಲು ನುಸುಳುತ್ತಿದ್ದಾಗ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಈ ಎರಡು ಘಟನೆಗಳಿಂದ ಒಟ್ಟು 9 ಮಂದಿ ಉಗ್ರರ ಹುಟ್ಟಡಗಿಸುವಲ್ಲಿ ಭಾರತೀಯ ಸೇನೆ ಸಫಲವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.