ADVERTISEMENT

ಸಾಧುಗಳ ವೇಷ ಧರಿಸಿ ಐವರಿಂದ ವಂಚನೆ

ಪಿಟಿಐ
Published 7 ಆಗಸ್ಟ್ 2024, 16:47 IST
Last Updated 7 ಆಗಸ್ಟ್ 2024, 16:47 IST
..
..   

ಠಾಣೆ : ಸಾಧುಗಳ ವೇಷ ಧರಿಸಿದ್ದ ಐವರು, ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ. 

ಆರೋಪಿಗಳಲ್ಲಿ ಒಬ್ಬ, ಭೀವಂಡಿ ನಿವಾಸಿಯಾಗಿರುವ ದೂರುದಾರರನ್ನು ಅವರ ಅಂಗಡಿಯ ಬಳಿ ಭೇಟಿಯಾಗಿ ನಿಮಗೆ ತೊಂದರೆಗಳಿವೆಯೇ ಎಂದು ಪ್ರಶ್ನಿಸಿದ್ದ. ಬಳಿಕ ಸಹಾಯ ಮಾಡುವುದಾಗಿ ತಿಳಿಸಿ, ಆಗಸ್ಟ್‌ 2ರಂದು ದೇವಸ್ಥಾನವೊಂದಕ್ಕೆ ಬರುವಂತೆ ಹೇಳಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

‘ದೂರುದಾರರು ದೇವಸ್ಥಾನಕ್ಕೆ ಹೋದ ವೇಳೆ, ಪೂಜೆ ಮಾಡುವಂತೆ ಹೇಳಿದ್ದರು. ಅವರು ಪೂಜೆಯಲ್ಲಿ ನಿರತರಾಗಿರುವಾಗ ಆರೋಪಿಗಳು ₹50 ಸಾವಿರ ಮೌಲ್ಯದ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾರೆ. ಇದರೊಂದಿಗೆ ಪೂಜೆಯ ಖರ್ಚು ಎಂದು ₹20 ಸಾವಿರ ಹಣ ಪಡೆದುಕೊಂಡಿದ್ದಾರೆ. ಮರುದಿನ ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು ಇನ್ನೊಂದು ಪೂಜೆಗಾಗಿ ₹75 ಸಾವಿರ ನೀಡುವಂತೆ ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ವಂಚನೆಯ ಬಗ್ಗೆ ಅರಿವಾಗುತ್ತಿದ್ದಂತೆ ಸಂತ್ರಸ್ತರು ಪೊಲೀಸರ ಮೊರೆಹೋಗಿದ್ದಾರೆ. ಗುಜರಾತ್‌ ಮೂಲದ ಒಬ್ಬ ವ್ಯಕ್ತಿ ಮತ್ತು ನಾಲ್ವರು ಅಪರಿಚಿತರ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.