ADVERTISEMENT

ಐಐಟಿ ಖರಗಪುರ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ

ಪಿಟಿಐ
Published 4 ಮೇ 2025, 13:54 IST
Last Updated 4 ಮೇ 2025, 13:54 IST
<div class="paragraphs"><p>ಐಐಟಿ ಖರಗಪುರ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ</p></div>

ಐಐಟಿ ಖರಗಪುರ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ

   

ಕೋಲ್ಕತ್ತ: ಐಐಟಿ ಖರಗಪುರದಲ್ಲಿ ಬಿ.ಟೆಕ್‌ ಮೂರನೇ ವರ್ಷದ ವಿದ್ಯಾರ್ಥಿಯ ಮೃತದೇಹವು ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಹಮ್ಮದ್‌ ಆಸಿಫ್‌ ಕಮರ್‌ ಅವರ ಮೃತದೇಹವು ಕ್ಯಾಂಪಸ್‌ನ ಮದನ್‌ಮೋಹನ್‌ ಮಾಳವೀಯ ಹಾಲ್‌ನ ಕೋಣೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.

ADVERTISEMENT

‘ಮಹಮ್ಮದ್‌ ಆಸಿಫ್‌ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಾಹ್ಯಮೂಲಗಳಿಂದ ಭದ್ರತಾ ತುರ್ತು ಸಂಖ್ಯೆಗೆ ಕರೆ ಬಂದಿತ್ತು. ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದಾಗ ವಿದ್ಯಾರ್ಥಿ ಮೃತಪಟ್ಟಿದ್ದರು’ ಎಂದು ಐಐಟಿಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖಾ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸ್ಥೆ ತಿಳಿಸಿದೆ.

ಮಹಮ್ಮದ್‌ ಆಸಿಫ್‌ ಬಿಹಾರದ ಶಿವಹರ್‌ ಜಿಲ್ಲೆಯವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.