ADVERTISEMENT

ಉತ್ತರ ಪ್ರದೇಶ: ಮೂರು ಚಿರತೆ ಮರಿಗಳು ಅನಾರೋಗ್ಯದಿಂದ ಸಾವು

ಪಿಟಿಐ
Published 22 ಸೆಪ್ಟೆಂಬರ್ 2020, 7:44 IST
Last Updated 22 ಸೆಪ್ಟೆಂಬರ್ 2020, 7:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಟಾವಾ (ಉತ್ತರ‍ಪ್ರದೇಶ):ಬಿಜ್ನೋರ್‌ನಿಂದ ಇಟಾವಾ ಸಫಾರಿ ಪಾರ್ಕ್‌ಗೆ ಕರೆತಂದಿದ್ದ ಮೂರು ಚಿರತೆ ಮರಿಗಳು ಅನಾರೋಗ್ಯದಿಂದ ಮೃತಪಟ್ಟಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ವಾರದ ಹಿಂದೆ ಇಲ್ಲಿಗೆ ಚಿರತೆ ಮರಿಗಳನ್ನು ಕರೆತರಲಾಗಿತ್ತು. ಆದರೆ ಭಾನುವಾರ ಮರಿಗಳ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವು ಸೋಮವಾರ ಸಾವನ್ನಪ್ಪಿವೆ’ ಎಂದು ಕಾನ್ಪುರಮೃಗಾಲಯದ ನಿರ್ದೇಶಕ ಆರ್‌.ಕೆ ಸಿಂಗ್ ಅವರು ಹೇಳಿದರು.

‘ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆಚಿರತೆ ಮರಿಗಳ ಶವಗಳನ್ನುಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.