ADVERTISEMENT

ಹುಲ್ಲಿನ ಬಣವೆ ಬೆಂಕಿ ತಗುಲಿ ಆಟವಾಡುತ್ತಿದ್ದ ಮೂವರು ಹೆಣ್ಣು ಮಕ್ಕಳು ಸಾವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 1:54 IST
Last Updated 1 ಡಿಸೆಂಬರ್ 2019, 1:54 IST
   

ಕಳಹಂಡಿ (ಒಡಿಸ್ಸಾ): ಹುಲ್ಲಿನ ಬಣವೆಯೊಂದರ ಬಳಿ ಆಟವಾಡುತ್ತಿದ್ದ ಮೂವರು ಪುಟ್ಟ ಬಾಲಕಿಯರು ಬೆಂಕಿಗೆ ಅಹುತಿಯಾಗಿರುವ ದುರಂತ ಇಲ್ಲಿನ ಕಳಹಂಡಿ ಜಿಲ್ಲೆಯ ಬಿಜಮಾರ ಗ್ರಾಮದಲ್ಲಿ ಸಂಭವಿಸಿದೆ.

ಮೂವರು ಮಕ್ಕಳಲ್ಲಿ ಇಬ್ಬರು ಅವಳಿ, ಡೈಸಿ ಹಾಗೂ ರೋಸಿ, ಮತ್ತೊಂದು ಮಗು ರಚನಾ ರಾವುತ್ ಎನ್ನಲಾಗಿದ್ದು, ಮೂವರು ನಾಲ್ಕರಿಂದ ಐದು ವರ್ಷದವರು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಸಂಜೆ ಮೂವರು ಬಣವೆ ಸಮೀಪ ಆಟವಾಡುತ್ತಿದ್ದರು, ಇದ್ದಕ್ಕಿದ್ದಂತೆ ಬಣವೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಕ್ಕಳು ಬೆಂಕಿಗೆ ಸಿಲುಕಿ ತೀವ್ರ ಗಾಯಗೊಂಡರು. ಬೆಂಕಿ ಸಮೀಪಕ್ಕೆ ಪೋಷಕರು ಧಾವಿಸಿ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಶೇ. 80 ರಿಂದ 90ರಷ್ಟು ಸುಟ್ಟಗಾಯಗಳಿಂದ ಅಸ್ವಸ್ಥರಾಗಿದ್ದ ಮಕ್ಕಳಲ್ಲಿ ಒಂದು ಮಗು ಮಾರ್ಗ ಮಧ್ಯೆಯೇ ಸಾವನ್ನಪ್ಪಿದೆ.

ADVERTISEMENT

ಉಳಿದ ಇಬ್ಬರು ಮಕ್ಕಳನ್ನುಹೆಚ್ಚಿನ ಚಿಕಿತ್ಸೆಗಾಗಿಸಮೀಪದ ಕೊಕ್ಸಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆನೀಡುತ್ತಿದ್ದ ಸಮಯದಲ್ಲಿ ಇಬ್ಬರು ಮಕ್ಕಳುಮೃತಪಟ್ಟಿದ್ದಾರೆ ಎನ್ನಲಾಗಿದೆ.

'ಶೇ.80 ರಿಂದ 90 ಭಾಗ ಸುಟ್ಟಗಾಯಗಳಾಗಿದ್ದರಿಂದ ಒಂದು ಮಗು ಮಾರ್ಗ ಮಧ್ಯೆ ಮೃತಪಟ್ಟಿದೆ. ಉಳಿದ ಎರಡು ಮಕ್ಕಳು ಆಸ್ಪತ್ರೆಗೆ ದಾಖಲಿಸಿದ 30 ನಿಮಿಷದಲ್ಲಿಯೇ ಮೃತಪಟ್ಟವು' ಎಂದು ಆಸ್ಪತ್ರೆಯ ವೈದ್ಯರಾದ ಡಾ.ನಾರಾಯಣ್ ಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.