ADVERTISEMENT

ಬಿಸಿಲ ಝಳಕ್ಕೆ ಮೂವರ ಬಲಿ

ಪಿಟಿಐ
Published 24 ಮಾರ್ಚ್ 2019, 16:52 IST
Last Updated 24 ಮಾರ್ಚ್ 2019, 16:52 IST
   

ತಿರುವನಂತಪುರ: ಕೇರಳದ ವಿವಿಧೆಡೆಗಳಲ್ಲಿ ತೀವ್ರ ಬಿಸಿಲ ಝಳಕ್ಕೆ ಮೂರು ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದ 14 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ತಾಪಮಾನವು ಎರಡರಿಂದ ಮೂರು ಡಿಗ್ರಿವರೆಗೆ ಏರಿಕೆಯಾಗಲಿದೆ ಎಂದು ಕೇರಳ ವಿಪತ್ತು ನಿರ್ವಹಣಾ ಮಂಡಳಿ, ಮಾರ್ಚ್‌ 26ರಂದು ಎಚ್ಚರಿಕೆ ನೀಡಿತ್ತು. ತಿರುವನಂತಪುರ, ಕಣ್ಣೂರು ಹಾಗೂ ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ‍್ಪಿರುವ ಬಗ್ಗೆ ವರದಿಯಾಗಿದೆ.

‘ಬಿಸಿಲ ಝಳದಿಂದಲೇ ಮೂವರು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ನೈಜ ಕಾರಣ ಪತ್ತೆಯಾಗಲಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.