ADVERTISEMENT

ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಭಾರತ ಭೇಟಿ ಹಿನ್ನೆಲೆ ದೆಹಲಿಯಲ್ಲಿ ಬಿಗಿ ಭದ್ರತೆ

ಪಿಟಿಐ
Published 21 ಏಪ್ರಿಲ್ 2025, 4:22 IST
Last Updated 21 ಏಪ್ರಿಲ್ 2025, 4:22 IST
<div class="paragraphs"><p>ಉಷಾ ವ್ಯಾನ್ಸ್ ಮತ್ತು ಜೆ.ಡಿ. ವ್ಯಾನ್ಸ್ </p></div>

ಉಷಾ ವ್ಯಾನ್ಸ್ ಮತ್ತು ಜೆ.ಡಿ. ವ್ಯಾನ್ಸ್

   

ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅಮೆರಿಕದ ಎರಡನೇ ಮಹಿಳೆ ಉಷಾ ಅವರ ಭಾರತ ಭೇಟಿ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವ್ಯಾನ್ಸ್, ಅವರ ಭಾರತ ಮೂಲದ ಪತ್ನಿ ಉಷಾ ಮತ್ತು ಅವರ ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ ಅವರು ನಾಲ್ಕು ದಿನಗಳ ಭಾರತ ಭೇಟಿಗಾಗಿ ಬೆಳಿಗ್ಗೆ 10ಗಂಟೆ ಸುಮಾರಿಗೆ ಪಾಲಂ ವಾಯುನೆಲೆಯಲ್ಲಿ ಇಳಿಯಲಿದ್ದಾರೆ.

ADVERTISEMENT

‘ಅಮೆರಿಕ ಉಪಾಧ್ಯಕ್ಷರ ಉನ್ನತ ಮಟ್ಟದ ಭೇಟಿಗಾಗಿ ಭದ್ರತಾ ಪ್ರೋಟೊಕಾಲ್ ಪ್ರಕಾರ, ನಾವು ಈಗಾಗಲೇ ಅಣಕು ಕವಾಯತುಗಳನ್ನು ನಡೆಸಿದ್ದೇವೆ. ಭೇಟಿಯ ಸಮಯದಲ್ಲಿ ಎಲ್ಲವೂ ಸುಗಮವಾಗಿ ನಡೆಯುವಂತೆ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ಎಂದು ಅಧಿಕಾರಿ ಹೇಳಿದ್ದಾರೆ.

ದೆಹಲಿ ಸಂಚಾರ ಪೊಲೀಸರು ಸಹ ಅಮೆರಿಕ ಉಪಾಧ್ಯಕ್ಷರು ಸಂಚರಿಸುವ ಮಾರ್ಗಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.

ದೆಹಲಿಗೆ ಬಂದ ಕೆಲವೇ ಗಂಟೆಗಳ ನಂತರ, ವ್ಯಾನ್ಸ್ ಮತ್ತು ಅವರ ಕುಟುಂಬ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದೆ.

ಸಾಂಪ್ರದಾಯಿಕ ಭಾರತೀಯ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗೂ ಭೇಟಿ ನೀಡಬಹುದು ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷರು ಸಂಜೆ ಭೇಟಿ ನೀಡಲಿರುವ ಅಕ್ಷರಧಾಮ ದೇವಾಲಯದಲ್ಲಿ ನಾವು ಸುಧಾರಿತ ಭದ್ರತಾ ವ್ಯವಸ್ಥೆವನ್ನು ಮಾಡಿದ್ದೇವೆ. ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ ಮತ್ತು ನಮ್ಮ ತಂಡಗಳನ್ನು ಆವರಣದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ವ್ಯಾನ್ಸ್ ಇಂದು ರಾತ್ರಿ ದೆಹಲಿಯಿಂದ ಹೊರಟು ನಂತರ ಜೈಪುರ ಮತ್ತು ಆಗ್ರಾಗೆ ಪ್ರಯಾಣಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.