ADVERTISEMENT

ಕೌಟುಂಬಿಕ ಹೊಣೆ, ನ್ಯಾಯಮೂರ್ತಿ ಸ್ಥಾನಕ್ಕೇರಲು ಮಹಿಳೆಯರ ಹಿಂದೇಟು–ಸುಪ್ರೀಂ

ಪಿಟಿಐ
Published 15 ಏಪ್ರಿಲ್ 2021, 16:43 IST
Last Updated 15 ಏಪ್ರಿಲ್ 2021, 16:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ನವದೆಹಲಿ: ಮಹಿಳೆಯೊಬ್ಬರು ದೇಶದ ಮುಖ್ಯ ನ್ಯಾಯಮೂರ್ತಿಯಾಗುವ ಸಮಯ ಬಂದಿದೆ. ಆದರೆ ಮನೆ ಮತ್ತು ಪೋಷಕ ಜವಾಬ್ದಾರಿಗಳನ್ನು ಉಲ್ಲೇಖಿಸಿ ಮಹಿಳಾ ವಕೀಲರು ನ್ಯಾಯಾಧೀಶರ ಹುದ್ದೆಯನ್ನು ನಿರಾಕರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ನ್ಯಾಯಮೂರ್ತಿಗಳ ಹುದ್ದೆಗೆ ಮಹಿಳಾ ವಕೀಲರನ್ನು ಆಯ್ಕೆ ಮಾಡಲು ಹೈಕೋರ್ಟ್ ಕೊಲಿಜಿಯಂ ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿದೆ.
‘ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಪೀಠಕ್ಕೆ ಬರಲು ವಕೀಲೆಯರನ್ನು ಕೇಳಿದಾಗ ಅವರು ಮನೆಯ ಜವಾಬ್ದಾರಿ ಅಥವಾ ಅವರ ಮಕ್ಕಳು 11 ಅಥವಾ 12ನೇ ತರಗತಿಯಲ್ಲಿ ಓದುತ್ತಿದ್ದಾರೆ ಎನ್ನುವ ಕಾರಣ ನೀಡಿ ನ್ಯಾಯಪೀಠ ಅಲಂಕರಿಸಲು ನಿರಾಕರಿಸುತ್ತಾರೆ. ಇದನ್ನು ಅವರು ನನ್ನ ಗಮನಕ್ಕೂ ತಂದಿದ್ದಾರೆ’ ಎಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.