ADVERTISEMENT

Lunar Eclipse | ಚಂದ್ರಗ್ರಹಣ: ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲ ಬಂದ್‌

ಪಿಟಿಐ
Published 7 ಸೆಪ್ಟೆಂಬರ್ 2025, 13:04 IST
Last Updated 7 ಸೆಪ್ಟೆಂಬರ್ 2025, 13:04 IST
   

ತಿರುಪತಿ (ಆಂಧ್ರಪ್ರದೇಶ): ಚಂದ್ರಗ್ರಹಣ ಹಿನ್ನೆಲೆ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಸೆಪ್ಟೆಂಬರ್ 7ರ ಮಧ್ಯಾಹ್ನ 3.30ರಿಂದ ಸೆಪ್ಟೆಂಬರ್ 8ರ ಬೆಳಗಿನ ಜಾವ 3 ಗಂಟೆಯವರೆಗೆ ಮುಚ್ಚಲಾಗುತ್ತದೆ ಎಂದು ದೇಗುಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಹಣದ ಸಮಯದಲ್ಲಿ(ಸೆಪ್ಟೆಂಬರ್ 7) ದೇಗುಲ ಮುಚ್ಚಿರಲಿದೆ. ಸೆಪ್ಟೆಂಬರ್ 8ರಂದು ಮುಂಜಾನೆ ತೆರೆಯಲಾಗುತ್ತದೆ. ಭಕ್ತರು ಸಹಕರಿಸುವಂತೆ ಟಿಟಿಡಿ ಮನವಿ ಮಾಡಿದೆ.

‘ಭಾನುವಾರ ರಾತ್ರಿ 9.57ರಿಂದ ಗ್ರಹಣ ಪ್ರಕ್ರಿಯೆ ಆರಂಭವಾಗಲಿದೆ. 11.01ರಿಂದ 12.23ರ ಅವಧಿಯಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಸೋಮವಾರ ಮುಂಜಾನೆ 2.25ಕ್ಕೆ ಅಂತ್ಯಗೊಳ್ಳುತ್ತದೆ. ಗ್ರಹಣದ ಸಮಯ ತಡ ರಾತ್ರಿವರೆಗೂ ಈ ಪ್ರಕ್ರಿಯೆಯನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.