ADVERTISEMENT

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟನ್‌ ಪತನ, ಎಲ್ಲ ಐವರು ಸಿಬ್ಬಂದಿ ನಿಧನ

ಪಿಟಿಐ
Published 22 ಅಕ್ಟೋಬರ್ 2022, 9:32 IST
Last Updated 22 ಅಕ್ಟೋಬರ್ 2022, 9:32 IST
ದುರಂತ ನಡೆದ ಪರ್ವತ ಪ್ರದೇಶ
ದುರಂತ ನಡೆದ ಪರ್ವತ ಪ್ರದೇಶ   

ಇಟಾನಗರ: ಅರುಣಾಚಲ ಪ್ರದೇಶದ ಅಪ್ಪರ್‌ ಸಿಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಸೇನೆಯ ಹೆಲಿಕಾಪ್ಟರ್‌ ದುರಂತದಲ್ಲಿ ಎಲ್ಲ ಐವರು ಮೃತಪಟ್ಟಿದ್ದಾರೆ. ನಾಪತ್ತೆಯಾಗಿದ್ದ ಓರ್ವ ಸಿಬ್ಬಂದಿಯ ಮೃತದೇಹ ಶನಿವಾರ ಸಿಕ್ಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ದೈನಂದಿನ ತಾಲೀಮು ನಡೆಸುತ್ತಿದ್ದ ‘ಸುಧಾರಿತ ಲಘು ಹೆಲಿಕಾಪ್ಟರ್‌’ (ಎಎಲ್‌ಎಚ್‌) ಬೆಳಿಗ್ಗೆ 10.43ಕ್ಕೆ ಮಿಗ್ಗಿಂಗ್‌ ಎಂಬ ಹಳ್ಳಿಯ ಸಮೀಪ ಪತನಗೊಂಡಿತ್ತು. ಘಟನಾ ಸ್ಥಳದಲ್ಲಿ ನಾಲ್ಕು ಶವಗಳು ಸಿಕ್ಕಿದ್ದವು. ನಾಪತ್ತೆಯಾಗಿದ್ದ ಓರ್ವ ಸಿಬ್ಬಂದಿಗಾಗಿ ಹುಡುಕಾಟ ನಡೆದಿತ್ತು.

ಹೆಲಿಕಾಪ್ಟರ್‌ ಪತನವಾಗಿರುವ ಸ್ಥಳವು ಚೀನಾ ಗಡಿಯಿಂದ 35 ಕಿ.ಮೀ.ದೂರದಲ್ಲಿದ್ದು, ಪರ್ವತಗಳಿಂದ ಕೂಡಿದೆ. ಸೇನೆ ಮತ್ತು ವಾಯು ಪಡೆಗಳು ಜಂಟಿಯಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.

ADVERTISEMENT

ರಾಜ್ಯದಲ್ಲಿ ಈ ತಿಂಗಳು ಸೇನೆಯ ಹೆಲಿಕಾಪ್ಟರ್‌ ಪತನಗೊಂಡ ಎರಡನೇ ದುರಂತ ಇದಾಗಿದೆ. ಅಕ್ಟೋಬರ್ 5ರಂದು ತವಾಂಗ್‌ ಜಿಲ್ಲೆಯಲ್ಲಿ ಚೀತಾ ಹೆಲಿಕಾಪ್ಟರ್‌ ಪತನವಾಗಿ, ಒಬ್ಬ ಪೈಲಟ್ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.