ADVERTISEMENT

ದೆಹಲಿಯಲ್ಲಿ ಭೂಕಂಪನ: ಹಲವರಿಗೆ ನಡುಕದ ಅನುಭವ, ಮನೆಯಿಂದ ಹೊರಗೆ ಓಡಿ ಬಂದ ಜನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 9:30 IST
Last Updated 24 ಜನವರಿ 2023, 9:30 IST
   

ನವದೆಹಲಿ: ದೆಹಲಿಯ ರಾಷ್ಟ್ರ ರಾಜಧಾನಿ ವಲಯದಲ್ಲಿ (NCR) ಭೂಕಂಪನ ಉಂಟಾಗಿರುವ ಘಟನೆ ನಡೆದಿದೆ.

ಭೂಮಿ ಕಂಪನದಿಂದ ಕಟ್ಟಡಗಳಲ್ಲಿರುವವರಿಗೆ ಸುಮಾರು 30 ಸೆಕೆಂಡುಗಳ ಕಾಲ ನಡುಕದ ಅನುಭವ ಉಂಟಾಗಿದ್ದು ಈ ವಲಯದಲ್ಲಿ ಅನೇಕರು ಮನೆಯಿಂದ ಓಡಿ ಬಂದರು ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಉತ್ತರಾಖಂಡ, ನೇಪಾಳದಲ್ಲಿ ಭೂಕಂಪ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.