ADVERTISEMENT

ಲಖನೌ | ಪ್ರತ್ಯೇಕ ಎನ್‌ಕೌಂಟರ್‌: ಇಬ್ಬರು ಬ್ಯಾಂಕ್ ದರೋಡೆಕೋರರ ಹತ್ಯೆ

ಪಿಟಿಐ
Published 24 ಡಿಸೆಂಬರ್ 2024, 6:24 IST
Last Updated 24 ಡಿಸೆಂಬರ್ 2024, 6:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗಾಜೀಪುರ/ ಲಖನೌ: ಚಿನ್‌ಹಟ್‌ನಲ್ಲಿರುವ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಬ್ರಾಂಚ್‌ನಲ್ಲಿ ದರೋಡೆ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

ಕಿಸಾನ್‌ ಪಥದ ಸಮೀಪ ಲಖನೌ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಸೋಬಿಂದ್ ಕುಮಾರ್‌ನನ್ನು (26) ಹತ್ಯೆ ಮಾಡಲಾಗಿದೆ ಮತ್ತು ಗಾಜೀಪುರ ಪೊಲೀಸರ ಗುಂಡಿನ ದಾಳಿಗೆ ಸನ್ನಿ ದಯಾಳ್‌ (28) ಬಲಿಯಾಗಿದ್ದಾನೆ ಎಂದು ಹೇಳಿದರು.

ADVERTISEMENT

ಖಚಿತ ಮಾಹಿತಿ ಮೇರೆಗೆ ಚಿನಹಟ್‌ ಪ್ರದೇಶದಲ್ಲಿ ಎರಡು ವಾಹನಗಳನ್ನು ಪೊಲೀಸರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಶಂಕಿತ ಆರೋಪಿ ಸೋಬಿಂದ್‌ ಕುಮಾರ್‌, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ. ಪೊಲೀಸರು ಪ್ರತಿದಾಳಿ ನಡೆಸಿದರು. ಗಾಯಗೊಂಡಿದ್ದ ಕುಮಾರ್‌ ಬಳಿಕ ಮೃತಪಟ್ಟಿದ್ದಾನೆ ಎಂದು ಸಹಾಯಕ ಪೊಲೀಸ್‌ ಆಯುಕ್ತ ರಾಧಾ ರಮಣ್‌ ಸಿಂಗ್‌ ತಿಳಿಸಿದರು.

‘ದಯಾಳ್‌ನನ್ನು ಹುಡುಕಿಕೊಟ್ಟವರರಿಗೆ ₹25,000 ಬಹುಮಾನ ಘೋಷಿಸಲಾಗಿತ್ತು ಎಂದು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್‌ ಕುಮಾರ್‌ ತಿಳಿಸಿದರು.

‘ಬಾರಾ ಪೊಲೀಸ್ ಹೊರಠಾಣೆ ಸಮೀಪ ಬೈಕ್‌ವೊಂದರ ತಪಾಸಣೆಗಾಗಿ ಪ್ರಯತ್ನಿಸಿದಾಗ ಶಂಕಿತರು ಬಿಹಾರ ಗಡಿಯತ್ತ ಪಲಾಯನಕ್ಕೆ ಯತ್ನಿಸಿದರು. ನಂತರ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಸನ್ನಿ ದಯಾಳ್‌ ಮೃತಪಟ್ಟಿದ್ದಾನೆ. ಎರಡನೇ ಆರೋಪಿಯು ಪರಾರಿಯಾಗಿದ್ದಾನೆ’ ಎಂದು ಅವರು ಹೇಳಿದರು.

ಘಟನಾ ಸ್ಥಳದಿಂದ ಪಿಸ್ತೂಲ್‌, ₹35,000 ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.