ADVERTISEMENT

ತರಬೇತಿ ವೇಳೆ ಅವಘಡ: ಇಬ್ಬರು ಸೈನಿಕರು ಮೃತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 19:30 IST
Last Updated 30 ಮಾರ್ಚ್ 2023, 19:30 IST
   

ಕೋಲ್ಕತ್ತ: ತರಬೇತಿ ನಡೆಯುತ್ತಿರುವ ವೇಳೆ ನಡೆದ ಅವಘಡದಲ್ಲಿ ಇಬ್ಬರು ಯೋಧರು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಬರಕ್‌ಪೋರ್‌ ಸೇನಾ ತರಬೇತಿ ಪ್ರದೇಶದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಸರೋಬರ್‌ ಸರೋವರದಲ್ಲಿ ಬುಧವಾರ ಅಸಾಲ್ಟ್‌ ರಿವರ್‌ ಕ್ರಾಸಿಂಗ್‌ (ಶತ್ರುವಿಗೆ ಸುಳಿವು ನೀಡದೇ ನೀರಿನಲ್ಲಿ ಚಲಿಸುವುದು) ತರಬೇತಿ ನೀಡಲಾಗುತ್ತಿತ್ತು. ಆ ವೇಳೆ ಹಗ್ಗ ತಂಡಾಗಿ ಮೂವರು ಯೋಧರು ನೀರಿಗೆ ಬಿದ್ದರು. ಅವರನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಇಬ್ಬರು ಆಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು.

ನಾಗಾಲ್ಯಾಂಡ್‌ನ ನಾಯ್ಕ್‌ ಲಂಗ್‌ಖೋಲಾಲ್‌ ಮತ್ತು ಮಿಜೋರಾಂನ ಸಿಪಾಯಿ ಹ್ಮಿಂಗ್ತಾಂಝೌಲ ಮೃತರು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.