ADVERTISEMENT

ಉತ್ತರ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ: ಗುಂಡೇಟಿಗೆ ಹಸು ಕಳ್ಳನ ಸಾವು

ಪಿಟಿಐ
Published 18 ಮೇ 2025, 19:46 IST
Last Updated 18 ಮೇ 2025, 19:46 IST
<div class="paragraphs"><p>‌</p></div>

   

ಲಖನೌ: ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಗೋವು ಕಳ್ಳ ಸಾಗಣೆದಾರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಗೋವು ಕಳ್ಳ ಎನ್ನಲಾದ ಸಲ್ಮಾನ್ ಅವರು ಸಾವಿಗೀಡಾಗಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೇ 15ರಂದು ಮುಂಜಾನೆ ಪರಾವ್‌ಗಂಜ್ ಠಾಣೆಯ ಕಾನ್‌ಸ್ಟೆಬಲ್‌ ಪ್ರತಿಮಾ ಸಿಂಗ್‌ ಮತ್ತು ಇಬ್ಬರು ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಆರೋಪಿಗಳು ಗೋವು ಸಾಗಿಸುತ್ತಿದ್ದ ವಾಹನದಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಸಿಂಗ್‌ಗೆ ಗಂಭೀರ
ಗಾಯಗಳಾಗಿದ್ದವು. ಘಟನೆ ನಂತರ ಜಿಲ್ಲೆಯಾದ್ಯಂತ ಗೋವು ಕಳ್ಳಸಾಗಣೆದಾರರ ಮೇಲೆ ನಿಗಾ ಇಡಲಾಗಿತ್ತು.

ADVERTISEMENT

ಶನಿವಾರ ರಾತ್ರಿ ಖುಜ್ಜಿ ಪ್ರದೇಶದಲ್ಲಿ ಇನ್ಸ್‌ಪೆಕ್ಟರ್‌ ಸತ್ಯಪ್ರಕಾಶ್‌ ಸಿಂಗ್ ತಂಡ ವಾರಾಣಸಿ–ಆಜಮ್‌ಗಢ ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ತಡೆದಿದ್ದರು. ಹೆಡ್ ಕಾನ್‌ಸ್ಟೆಬಲ್‌ ದುರ್ಗೇಶ್ ಕುಮಾರ್ ಸಿಂಗ್ ಎಂಬುವರಿಗೆ ಡಿಕ್ಕಿ ಹೊಡೆಸಿ ಆರೋಪಿಗಳು ಪರಾರಿಯಾಗಿದ್ದರು. ದುರ್ಗೇಶ್‌ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಡಿಜಿಪಿ ಪ್ರಶಾಂತ ಕುಮಾರ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.