ADVERTISEMENT

ವಾಯುಪಡೆ ಸಿಬ್ಬಂದಿಯಿಂದ ಇಬ್ಬರು ಮೀನುಗಾರರ ರಕ್ಷಣೆ

ಜಮ್ಮು ಕಾಶ್ಮೀರದ ತಾವಿ ನದಿಯಲ್ಲಿ ಸಿಲುಕ್ಕಿದ್ದ ಮೀನುಗಾರರು

ಏಜೆನ್ಸೀಸ್
Published 19 ಆಗಸ್ಟ್ 2019, 17:47 IST
Last Updated 19 ಆಗಸ್ಟ್ 2019, 17:47 IST
ಜಮ್ಮುವಿನ ತಾವಿ ನದಿಯಲ್ಲಿ ನಿರ್ಮಾಣ ಹಂತದ ಸೇತುವೆಯ ಬಳಿ ಪ್ರವಾಹದ ನೀರಿನ ನಡುವೆ ಸಿಲುಕಿಕೊಂಡಿದ್ದ ಇಬ್ಬರನ್ನು ವಾಯುಪಡೆಯ ಯೋಧರು ಹೆಲಿಕಾಪ್ಟರ್‌ ಮೂಲಕ ಸೋಮವಾರ ರಕ್ಷಣೆ ಮಾಡಿದರು  –ಪಿಟಿಐ ಚಿತ್ರ
ಜಮ್ಮುವಿನ ತಾವಿ ನದಿಯಲ್ಲಿ ನಿರ್ಮಾಣ ಹಂತದ ಸೇತುವೆಯ ಬಳಿ ಪ್ರವಾಹದ ನೀರಿನ ನಡುವೆ ಸಿಲುಕಿಕೊಂಡಿದ್ದ ಇಬ್ಬರನ್ನು ವಾಯುಪಡೆಯ ಯೋಧರು ಹೆಲಿಕಾಪ್ಟರ್‌ ಮೂಲಕ ಸೋಮವಾರ ರಕ್ಷಣೆ ಮಾಡಿದರು –ಪಿಟಿಐ ಚಿತ್ರ   

ಜಮ್ಮು: ಜಮ್ಮುಕಾಶ್ಮೀರದಲ್ಲಿ ಹರಿಯುವ ನದಿಯೊಂದರಲ್ಲಿ ಮೀನು ಹಿಡಿಯಲು ಹೋಗಿ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಮೀನುಗಾರರನ್ನು ಭಾರತೀಯ ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್ ಬಳಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಭಾರತದ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ನದಿಪಾತ್ರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆರಾಜ್ಯಸರ್ಕಾರಗಳು ತಿಳಿಸಿವೆ. ಅಲ್ಲದೆ ಮೀನುಗಾರರು ನದಿಗೆ ಇಳಿಯದಂತೆ ತಿಳಿಸಿವೆ.

ಆದರೂ ಸೋಮವಾರ ಜಮ್ಮು ಕಾಶ್ಮೀರದ ತಾವಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರರು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದರು. ಈಸಮಯದಲ್ಲಿಇಬ್ಬರು ಮೀನುಗಾರರು ನದಿಯ ನಿರ್ಮಾಣ ಹಂತದಲ್ಲಿದ್ದ ಗೋಡೆಯಲ್ಲಿಕುಳಿತು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ನದಿಯ ಮಧ್ಯದಲ್ಲಿ ಇಬ್ಬರೇ ಕುಳಿತಿದ್ದನ್ನು ಗಮನಿಸಿದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಿಬ್ಬಂದಿ ಹಗ್ಗದ ಸಹಾಯದಿಂದ ಇಬ್ಬರು ಇದ್ದ ಜಾಗ ತಲುಪಿದ್ದಾರೆ. ನಂತರ ಅವರನ್ನು ಅದೇ ಹಗ್ಗ ಬಳಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.