ತಿರುವನಂತಪುರ: ಕೇರಳದ ತ್ರಿಶ್ಶೂರ್ ಜಿಲ್ಲೆಯ ಅತಿರಾಪಿಳ್ಳಿ ಅರಣ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಕಾಡಾನೆಗಳ ದಾಳಿಯಿಂದ ಮೂವರು ಮೃತಪಟ್ಟಿದ್ದಾರೆ.
ಕಿರುಉತ್ಪನ್ನಗಳನ್ನು ಸಂಗ್ರಹಿಸಲಿಕ್ಕಾಗಿ ಕಾಡಿಗೆ ಹೋಗಿದ್ದ ವಾಳಚ್ಚಾಲ್‌ನ ಸಸ್ತಂಪೂವಂ ವಸತಿಯ ಬುಡಕಟ್ಟು ಜನರಾದ ಸತೀಶ್ ಹಾಗೂ ಅಂಬಿಕಾ ಕಾಡಾನೆ ದಾಳಿಯಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಅತಿರಾಪಿಳ್ಳಿ ಸಮೀಪದ ಮಲಕ್ಕಪರ ಗ್ರಾಮದ ಬುಡಕಟ್ಟು ಯುವಕ ಸೆಬಾಸ್ಟಿಯನ್ (20) ಜೇನುತುಪ್ಪ ಸಂಗ್ರಹಕ್ಕಾಗಿ ಕಾಡಿಗೆ ಹೋಗಿದ್ದಾಗ ಭಾನುವಾರ ರಾತ್ರಿ ಕಾಡಾನೆ ತುಳಿದು ಮೃತರಾಗಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೂ ಕಾಡುಪ್ರಾಣಿಗಳ ದಾಳಿಯಿಂದ 18 ಜನರು ಮೃತಪಟ್ಟಿದ್ದಾರೆ.
ಮಾನವ– ಪ್ರಾಣಿ ಸಂಘರ್ಷ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.