ADVERTISEMENT

ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ ಭಾರತದ ಮತ್ತೆರಡು ಸ್ಥಳ ಸೇರ್ಪಡೆ

ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ (ವೆಟ್‌ಲ್ಯಾಂಡ್) ಮತ್ತೆ ಭಾರತದ 2 ಪ್ರದೇಶಗಳು ಸೇರ್ಪಡೆಯಾಗಿವೆ.

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 2:52 IST
Last Updated 5 ಜೂನ್ 2025, 2:52 IST
<div class="paragraphs"><p>1 ರಾಜಸ್ಥಾನದ ಪಾಲೋಡಿ ಜಿಲ್ಲೆಯ ಪಾಲೋಡಿ ತಾಲ್ಲೂಕಿನ ಖಿಚನ್ ಜೌಗು ಪ್ರದೇಶ, 2&nbsp;ಉದಯಪುರ ಜಿಲ್ಲೆಯ ಮೆನಾರ್ ಜೌಗು ಪ್ರದೇಶ</p></div>

1 ರಾಜಸ್ಥಾನದ ಪಾಲೋಡಿ ಜಿಲ್ಲೆಯ ಪಾಲೋಡಿ ತಾಲ್ಲೂಕಿನ ಖಿಚನ್ ಜೌಗು ಪ್ರದೇಶ, 2 ಉದಯಪುರ ಜಿಲ್ಲೆಯ ಮೆನಾರ್ ಜೌಗು ಪ್ರದೇಶ

   

ನವದೆಹಲಿ: ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ (ವೆಟ್‌ಲ್ಯಾಂಡ್) ಮತ್ತೆ ಭಾರತದ 2 ಪ್ರದೇಶಗಳು ಸೇರ್ಪಡೆಯಾಗಿವೆ.

ರಾಜಸ್ಥಾನದ ಪಾಲೋಡಿ ಜಿಲ್ಲೆಯ ಪಾಲೋಡಿ ತಾಲ್ಲೂಕಿನ ಖಿಚನ್ ಜೌಗು ಪ್ರದೇಶ ಹಾಗೂ ರಾಜಸ್ಥಾನದ ಉದಯಪುರ ಜಿಲ್ಲೆಯ ಮೆನಾರ್ ಜೌಗು ಪ್ರದೇಶ ರಾಮ್ಸರ್ ಪಟ್ಟಿಗೆ ಸೇರ್ಪಡೆಯಾಗಿವೆ. ಈ ಮೂಲಕ ರಾಮ್ಸರ್ ಪಟ್ಟಿಗೆ ಸೇರ್ಪಡೆಯಾದ ಜೌಗು ಭೂಮಿ ಪ್ರದೇಶಗಳ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.

ADVERTISEMENT

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ವಿಷಯವನ್ನು ಎಕ್ಸ್‌ ಮೂಲಕ ತಿಳಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಕೊಟ್ಟ ಮಹತ್ವದಿಂದಾಗಿಯೇ ಭಾರತದಲ್ಲಿ ರಾಮ್ಸರ್ ಪಟ್ಟಿಗೆ ಸೇರಿರುವ ಜೌಗು ಪ್ರದೇಶಗಳ ಸಂಖ್ಯೆ ಬೆಳೆಯುತ್ತಾ ಇದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೂ ಈ ಕುರಿತು ಸಂತಸ ಹಂಚಿಕೊಂಡಿದ್ದು, ಭಾರತಕ್ಕೆ ಇದೊಂದು ದೊಡ್ಡ ವಿಷಯ. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚುತ್ತಿರುವ ನಡೆಯನ್ನು ಇದು ಹೇಳುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ

ಕಳೆದ ವರ್ಷ ತಮಿಳುನಾಡಿನ ನಂಜರಾಯನ್ ಪಕ್ಷಿಧಾಮ, ಕಾಜುವೇಲಿ ಪಕ್ಷಿಧಾಮ ಹಾಗೂ ಮಧ್ಯಪ್ರದೇಶದ ತಾವಾ ಸಂರಕ್ಷಿತ ಪ್ರದೇಶವನ್ನು ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದವು.

ಭಾರತದಲ್ಲಿ 10.36 ಲಕ್ಷ ಹೆಕ್ಟರ್‌ಗೂ ಹೆಚ್ಚು ವ್ಯಾಪ್ತಿಯ ರಾಮ್ಸರ್ ಜೌಗುಭೂಮಿ ಇದೆ. ಭಾರತದಲ್ಲಿ ತಮಿಳುನಾಡು (18) ಅತಿ ಹೆಚ್ಚು ಜೌಗುಭೂಮಿಗಳನ್ನು ಹೊಂದಿದ್ದು ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (10) ಇದೆ.

ಕೇಂದ್ರ ಸರ್ಕಾರದ ಹಲವಾರು ಪರಿಸರಸ್ನೇಹಿ ಕ್ರಮಗಳಿಂದ ಭಾರತದಲ್ಲಿ 2014ರಿಂದ 2024ರ ಹತ್ತು ವರ್ಷಗಳ ಅವಧಿಯಲ್ಲಿ 41 ರಾಮ್ಸರ್ ಮಾನ್ಯತೆಯ ಜೌಗುಭೂಮಿಗಳನ್ನು ಗುರುತಿಸಲಾಗಿದೆ. ಮೊದಲು ಇವುಗಳ ಸಂಖ್ಯೆ ಕೇವಲ 25 ಇತ್ತು ಎಂದು ಯಾದವ್ ತಿಳಿಸಿದ್ದರು.

1971ರ ಫೆಬ್ರುವರಿ 2 ರಂದು ಇರಾನಿನ ರಾಮ್ಸರ್ ನಗರದಲ್ಲಿ ಜೌಗುಭೂಮಿ ಸಮಾವೇಶವನ್ನು ಅಂಗೀಕರಿಸಲಾಗಿತ್ತು. ಆ ಮೂಲಕ ವಿಶ್ವದ ವೈವಿಧ್ಯಮಯ ಜಲಮೂಲಗಳ ಸಂರಕ್ಷಣೆ, ಪ್ರಾಣಿ–ಪಕ್ಷಿಗಳ ಸಂರಕ್ಷಣೆಯ ಉದ್ದೇಶವನ್ನು ಇದು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.