ADVERTISEMENT

ಮಿದುಳು ತಿನ್ನುವ ಅಮೀಬಾ ಸೋಂಕು: ಕೇರಳದಲ್ಲಿ ಇಬ್ಬರು ಸಾವು 

amoebic meningoencephalitis: 3 ತಿಂಗಳ ಹಸುಗೂಸು ಹಾಗೂ ಮತ್ತೊಬ್ಬ ರೋಗಿ ಸಾವಿಗೀಡಾಗಿದ್ದಾರೆ.

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 16:05 IST
Last Updated 1 ಸೆಪ್ಟೆಂಬರ್ 2025, 16:05 IST
   

ತಿರುವನಂತಪುರಂ: ‘ಮಿದುಳು ತಿನ್ನುವ ಅಮೀಬಾ’ (ಅಮೀಬಿಕ್‌ ಮೆನಿಂಗೊಎನ್ಸೆಫಲೈಟಿಸ್‌) ಸೋಂಕಿಗೆ ತುತ್ತಾಗಿ, ಕೋಯಿಕ್ಕೋಡ್‌ನ ವೈದ್ಯಕೀಯ ಕಾಲೇಜು–ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ತಿಂಗಳ ಹಸುಗೂಸು ಹಾಗೂ ಮತ್ತೊಬ್ಬ ರೋಗಿ ಸಾವಿಗೀಡಾಗಿದ್ದಾರೆ.

ಓಮಶ್ಶೇರಿ ನಿವಾಸಿ ಅಬೂಬಕರ್‌ ಸಿದ್ದಿಕಿ ಅವರ ಮಗು ಸೋಮವಾರ ಮೃತಪಟ್ಟಿದ್ದು, ಕಾಪ್ಪಿಲ್‌ನ ನಿವಾಸಿ ರಾಮ್ಲಾ ಅವರು ಭಾನುವಾರ ಮೃತಪಟ್ಟಿದ್ದಾರೆ. ಈ ವರ್ಷ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. 

42 ಮಂದಿಗೆ ಈ ವರ್ಷ ಸೋಂಕು ದೃಢಪಟ್ಟಿದ್ದು, ಇನ್ನೂ 13 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೀಬಿಕ್‌ ಮೆನಿಂಗೊ ಎನ್ಸೆಫಾಲಿಟಿಸ್‌ ಅಪರೂಪದ ಸೋಂಕು ಆಗಿದ್ದು, ಇದು ಕಲುಷಿತ ನೀರಿನ ಹರಡುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.