ADVERTISEMENT

ಪಾಕ್‌ನಿಂದ ವಿಶ್ವಸಂಸ್ಥೆ ವೇದಿಕೆ ದುರ್ಬಳಕೆ: ಭಾರತ

ಪಿಟಿಐ
Published 1 ನವೆಂಬರ್ 2019, 19:44 IST
Last Updated 1 ನವೆಂಬರ್ 2019, 19:44 IST

ವಿಶ್ವಸಂಸ್ಥೆ : ‘ವಿಶ್ವಸಂಸ್ಥೆಯ ಸ್ವಯಂ ನಿರ್ಧಾರ ಕುರಿತ ಜನರ ಹಕ್ಕು ಕುರಿತ ಕಾರ್ಯಸೂಚಿಯಲ್ಲಿ ಎಂದಿಗೂ ಜಮ್ಮು ಮತ್ತು ಕಾಶ್ಮೀರ ವಿಷಯ ಇರಲೇ ಇಲ್ಲ‘ ಎಂದು ಭಾರತ ಪ್ರತಿಪಾದಿಸಿದೆ.

ಗಡಿ ಕುರಿತ ಹಪಾಹಪಿಯಿಂದ ಪಾಕಿಸ್ತಾನ ವಿನಾಕಾರಣ ಈ ಅಂಶ ಉಲ್ಲೇಖಿಸುತ್ತಿದೆ ಎಂದೂ ತರಾಟೆಗೆ ತೆಗೆದುಕೊಂಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಸಮಿತಿ ಎದುರು ಇಸ್ಲಾಮಾಮಾದ್‌ ಮಂಡಿಸಿದ ವಾದಕ್ಕೆ ಪ್ರತಿಯಾಗಿ ಭಾರತ ಹೀಗೆ ಪ್ರತ್ಯುತ್ತರ ನೀಡಿದೆ.

ಅಧಿಕಾರದಿಂದ ನಿರ್ಗಮಿಸುತ್ತಿರುವ ಪಾಕಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿ ಮಲೀಹಾ ಲೋಧಿ ಸಮಿತಿಯ ಎದುರು ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.