ರಾಖಿ
ಝಾನ್ಸಿ: ರಾಖಿ ಕಟ್ಟಿದ ಮರುದಿನವೇ ತಂಗಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಆಕೆಯ ತಲೆ ಬೋಳಿಸಿ ಮೃತದೇಹವನ್ನು ಬಿಸಾಕಿದ್ದ ಅಣ್ಣನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ.
ಝಾನ್ಸಿ ಜಿಲ್ಲೆಯ ಚಂದ್ರಾಪುರದ ಕುಮಾರಿ ಊರ್ಪ್ ಪುಟ್ಟಿ ಕೊಲೆಯಾದ 18 ವರ್ಷದ ಯುವತಿ. ಕೊಲೆ ಆರೋಪದ ಮೇಲೆ ಪುಟ್ಟಿಯ ಅಣ್ಣ ಅರವಿಂದ್ (25) ಹಾಗೂ ಪ್ರಕಾಶ್ (25) ಎಂಬುವರನ್ನು ಬಂಧಿಸಲಾಗಿದೆ.
ಇತ್ತೀಚೆಗೆ ರಾಖಿ ಹಬ್ಬದ ದಿನ ಅಣ್ಣ ಅರವಿಂದ್‌ಗೆ ಪುಟ್ಟಿ ರಾಖಿ ಕಟ್ಟಿ ಸಂಭ್ರಮಿಸಿದ್ದರು. ಆದರೆ, ಅರವಿಂದ್ ಮನಸ್ಸಿನಲ್ಲಿ ವಿಷವಿಟ್ಟುಕೊಂಡು ತಂಗಿಗೆ ಅಂತ್ಯ ಕಾಣಿಸಿದ್ದಾನೆ. ಮೃತದೇಹವನ್ನು ಚಂದ್ರಾಪುರದ ರೈಲು ನಿಲ್ದಾಣದ ಬಳಿ ಎಸೆದಿದ್ದ.
ಪುಟ್ಟಿ, ವಿನೋದ್ (21) ಎಂಬ ಯುವಕನನ್ನು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದರು. ಕೆಲವು ದಿನಗಳ ಹಿಂದೆ ಮನೆಯವರು ಪುಟ್ಟಿಯನ್ನು ವಿನೋದ್‌ನಿಂದ ಬೇರ್ಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು.
ಈ ವಿಷಯ ತಿಳಿದ ಅರವಿಂದ್, ಪುಣೆಯಿಂದ ಊರಿಗೆ ಬಂದು ವಿನೋದ್‌ನನ್ನು ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕೊಲೆ ಮಾಡಿದ್ದ. ಇದಕ್ಕೆ ಸ್ನೇಹಿತ ಪ್ರಕಾಶ್‌ನನ್ನು ಜೊತೆಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಎರಡು ದಿನದ ಬಳಿಕ ಆಗಸ್ಟ್ 9 ರಂದು ರಾಖಿ ಹಬ್ಬದ ದಿನ ಪುಟ್ಟಿಯಿಂದ ರಾಖಿ ಕಟ್ಟಿಸಿಕೊಂಡು ಅರವಿಂದ್ ಕೃತ್ಯ ಎಸಗಿದ್ದಾನೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.