ADVERTISEMENT

ಉತ್ತರ ಪ್ರದೇಶದ ಬಿಜೆಪಿ ಶಾಸಕನ ವಿರುದ್ಧ ಗ್ಯಾಂಗ್‌ ರೇಪ್‌ ಆರೋಪ: ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 13:40 IST
Last Updated 19 ಫೆಬ್ರುವರಿ 2020, 13:40 IST
   

ಭದೋಡಿ: ಉತ್ತರ ಪ್ರದೇಶದ ಭದೋಡಿ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರನಾಥ್‌ ತ್ರಿಪಾಠಿ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಗುರುವಾರ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

2017ರಲ್ಲಿ ಒಂದು 40 ವರ್ಷದ ಮಹಿಳೆಯ ಮೇಲೆ ಶಾಸಕರವೀಂದ್ರನಾಥ್‌ ತ್ರಿಪಾಠಿ ಸೇರಿ ಏಳು ಮಂದಿ ಒಂದು ತಿಂಗಳ ಕಾಲ ನಿರಂತರ ಅತ್ಯಾಚಾರ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

‘ಇದೇ 10ರಂದು ಮಹಿಳೆ ದೂರು ದಾಖಲಿಸಿದ್ದರು. 2017ರಲ್ಲಿ ಶಾಸಕ ತ್ರಿಪಾಠಿ ಮತ್ತು ಅವರು ಆರು ಮಂದಿ ಬೆಂಬಲಿಗರು ತಮ್ಮನ್ನು ಹೋಟೆಲ್‌ನ ಕೊಠಡಿಯೊಂದರಲ್ಲಿ ಬಂಧಿಸಿದ್ದಾಗಿಯೂ, ಒಂದು ತಿಂಗಳ ಕಾಲ ನಿರಂತರ ಅತ್ಯಾಚಾರ ಮಾಡಿದ್ದಾಗಿಯೂ ಮಹಿಳೆ ಹೇಳಿದ್ದರು ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ಬದನ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ಘಟನೆಯಿಂದಾಗಿ ತಾವು ಗರ್ಭಿಣಿಯಾಗಿದ್ದಾಗಿಯೂ, ಬಲವಂತವಾಗಿ ಗರ್ಭಪಾತ ಮಾಡಿಸಲಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ.

‘ಪ್ರಕರಣದ ತನಿಖೆಯನ್ನು ಎಎಸ್‌ಪಿ ರವೀಂದ್ರ ವರ್ಮ ಎಂಬುವವರಿಗೆ ವಹಿಸಲಾಗಿತ್ತು. ಅವರ ವರದಿ ಆಧಾರದಲ್ಲಿ ಏಳು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ,’ ಎಂದು ಎಸ್‌ಪಿ ಸಿಂಗ್‌ ಹೇಳಿದ್ದಾರೆ.

ಮಹಿಳೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾದೀಶರ ಎದುರೇ ರೆಕಾರ್ಡ್‌ ಮಾಡಿಕೊಳ್ಳಲಾಗುವುದು ಎಂದೂ ಎಸ್‌ಪಿ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.