ADVERTISEMENT

ಉತ್ತರ ಪ್ರದೇಶ | ಅನುಚಿತವಾಗಿ ದೇಹಸ್ಪರ್ಶ ಆರೋಪ: ವೈದ್ಯ ದೋಷಮುಕ್ತ

ಪಿಟಿಐ
Published 31 ಆಗಸ್ಟ್ 2024, 15:38 IST
Last Updated 31 ಆಗಸ್ಟ್ 2024, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಜಹಾನ್‌ಪುರ, ಉತ್ತರಪ್ರದೇಶ: ಖಾಸಗಿ ನರ್ಸಿಂಗ್‌ ಹೋಂನಲ್ಲಿ ಮಹಿಳಾ ರೋಗಿಯೊಬ್ಬರ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪಕ್ಕೆ ತುತ್ತಾಗಿದ್ದ ಚರ್ಮವೈದ್ಯರನ್ನು ಪ್ರಾಥಮಿಕ ತನಿಖೆ ಆಧರಿಸಿ ಜಿಲ್ಲಾಡಳಿತವು ದೋಷಮುಕ್ತಗೊಳಿಸಿದೆ.

ತಪಾಸಣೆ ಮಾಡುವ ವೇಳೆ ವೈದ್ಯರು ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು. ತಪಾಸಣೆ ನಡೆಸಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಆರೋಪದ ಬೆನ್ನಲ್ಲೇ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಲಾಗಿತ್ತು.

ADVERTISEMENT

‘ದೃಶ್ಯ ಪರಿಶೀಲನೆ ವೇಳೆ ವೈದ್ಯರು ಕ್ಯಾಬಿನ್‌ ಹೊರಭಾಗದಿಂದ ಪರೀಕ್ಷೆ ನಡೆಸಿದ್ದು ದೃಢಪಟ್ಟಿತ್ತು. ಈ ವೇಳೆ ಮಹಿಳೆಯ ಪತಿಯೂ ಸ್ಥಳದಲ್ಲಿದ್ದರು. ಚಿಕಿತ್ಸೆ ಪಡೆದು, ಔಷಧಿ ಪಡೆದುಕೊಂಡು ಇಬ್ಬರು ಅಲ್ಲಿಂದ ತೆರಳಿದ್ದರು. ಇದಾದ ಅರ್ಧ ಗಂಟೆ ಬಳಿಕ ಮತ್ತೆ ನರ್ಸಿಂಗ್‌ ಹೋಂಗೆ ಬಂದಿದ್ದ ಮಹಿಳೆಯು ವೈದ್ಯರು ಅನುಚಿತವಾಗಿ ದೇಹ ಸ್ಪರ್ಶಿಸಿದ್ದಾರೆ ಎಂದು ಗಲಾಟೆ ಮಾಡಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಕುಮಾರ್ ಮೀನಾ ತಿಳಿಸಿದರು.

‘ಕೂಲಂಕುಷವಾಗಿ ದೃಶ್ಯ ಪರಿಶೀಲನೆ ವೇಳೆ ವೈದ್ಯರ ತಪ್ಪು ಮಾಡಿಲ್ಲ. ಹೀಗಾಗಿ ಆರೋಪದಿಂದ ಮುಕ್ತಗೊಳಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಸಿ.ಸಿ.ಟಿವಿ ಅಳವಡಿಕೆಗೆ ಸೂಚನೆ: ಘಟನೆ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಉಮೇಶ್‌ ಪ್ರತಾಪ್‌ ಸಿಂಗ್‌ ಅವರು ಎಲ್ಲ ಖಾಸಗಿ ನರ್ಸಿಂಗ್‌ ಹೋಂ ಮಾಲೀಕರ ಜತೆ ಸಭೆ ನಡೆಸಿದ್ದು, ಸಂಸ್ಥೆಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.