ADVERTISEMENT

ಉತ್ತರ ಪ್ರದೇಶ | ಹೋಳಿ ಹಬ್ಬದಂದು ನಮಾಜ್‌ ಮಾಡಿದ ವಿದ್ಯಾರ್ಥಿಗಳು: ಪ್ರಕರಣ ದಾಖಲು

ಪಿಟಿಐ
Published 15 ಮಾರ್ಚ್ 2025, 15:35 IST
Last Updated 15 ಮಾರ್ಚ್ 2025, 15:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮೀರಟ್‌: ಹೋಳಿ ಹಬ್ಬದಂದು ಇಲ್ಲಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಬಯಲಿನಲ್ಲಿ ವಿದ್ಯಾರ್ಥಿಗಳು ನಮಾಜ್‌ ಮಾಡುತ್ತಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು. ಈ ವಿಡಿಯೊದ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕಾರ್ತಿಕ್‌ ಹಿಂದೂ ಎಂಬುವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೊ ಹಂಚಿಕೆಯಾದ ಬಳಿಕ, ಹಿಂದೂ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದಾವೆ.

ADVERTISEMENT

‘ಕೋಮು ಸೌಹಾರ್ದವನ್ನು ಹದಗೆಡಿಸುವ ಉದ್ದೇಶದಿಂದಲೇ ವಿಡಿಯೊದ ಚಿತ್ರೀಕರಣ ಮಾಡಲಾಗಿದೆ. ಖಾಲಿದ್‌ ಪ್ರಧಾನ್‌ ಎಂಬುವರು ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಐಐಎಂಟಿ ಖಾಸಗಿ ವಿಶ್ವವಿದ್ಯಾಲಯದ ವಕ್ತಾರ ಸುನೀಲ್‌ ಶರ್ಮಾ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಈ ಬೆಳವಣಿಗೆಗಳ ಬಳಿಕ ಪ್ರಧಾನ್‌ ಅವರನ್ನು ಸೇರಿ ಮೂವರು ಭದ್ರತಾ ಸಿಬ್ಬಂದಿಯನ್ನು ವಿಶ್ವವಿದ್ಯಾಲಯ ಆಡಳಿತವು ಅಮಾನತು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.