ಮೋಹನ್ ಭಾಗವತ್
ಅಲಿಗಢ: ‘ಜಾತಿ ಆಧಾರಿತ ತಾರತಮ್ಯವು ಸಮಾಜದ ಒಗ್ಗಟ್ಟನ್ನು ಕುಂದಿಸುವ ವಿಭಜಕ ಶಕ್ತಿಯಾಗಿದೆ. ಆದ್ದರಿಂದ ಸಮಾಜದಲ್ಲಿರುವ ಜಾತಿ ಆಧಾರಿತ ತಾರತಮ್ಯವನ್ನು ಇಲ್ಲವಾಗಿಸುವ ಕಾರ್ಯದಲ್ಲಿ ತೊಡಗಿಕೊಳ್ಳಿ’ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ತಮ್ಮ ಪ್ರಚಾರಕರಿಗೆ ಕರೆ ನೀಡಿದರು.
ಮೋಹನ್ ಭಾಗವತ್ ಅವರು ಐದು ದಿನಗಳ ಭೇಟಿಗಾಗಿ ಅಲಿಗಢಕ್ಕೆ ಬಂದಿದ್ದರು. ಸೋಮವಾರವು ಅವರ ಭೇಟಿಯ ಕೊನೆಯ ದಿನವಾಗಿತ್ತು. ಅಂದು ತಮ್ಮ ಕಾರ್ಯಕರ್ತರೊಂದಿಗೆ ಅವರು ಮಾತುಕತೆ ನಡೆಸಿದ್ದರು. ಇದೇ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಕಾರ್ಯಕರ್ತರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
‘ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಸಮಾಜ ನಿರ್ಮಾಣಕ್ಕಾಗಿ, ಸಾಮಾಜಿಕವಾಗಿ ಒಗ್ಗಟ್ಟಿನಿಂದ ಇರುವ ಬಗ್ಗೆ ಅಡಿಪಾಯ ಹಾಕಿದ್ದರು. ಆಧುನಿಕ ಭಾರತದಲ್ಲಿ ಕ್ರಾಂತಿಯ ಬೀಜವನ್ನು ಬಿತ್ತಿದ, ನ್ಯಾಯದ ಹಾದಿ ತೋರಿಸಿದ ಅಂಬೇಡ್ಕರ್ ಅವರಿಗೆ ನಾವು ಋಣಿಯಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.