ಬಿಜ್ನೋರ್: ಉತ್ತರಪ್ರದೇಶದಲ್ಲಿ ಸರ್ಕಾರಿ ಶಾಲೆಯ ನಾಮಪಲಕದಲ್ಲಿ ಹಿಂದಿಯ ಜೊತೆ ಉರ್ದುವಿನಲ್ಲೂ ಶಾಲೆ ಹೆಸರನ್ನು ಬರೆದಿರುವುದು ಮುಖ್ಯಶಿಕ್ಷಕಿ ಅಮಾನತಿಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಬಿಜ್ನೋರ್‌ನ ಶಹನಪುರ್–2 ಶಾಲೆಯ ಮುಖ್ಯ ದ್ವಾರದ ನಾಮಪಲಕ ಹಾಗೂ ಒಳಗಿನ ಗೋಡೆಯ ಮೇಲೆ ಶಾಲೆಯ ಹೆಸರನ್ನು ಹಿಂದಿ ಹಾಗೂ ಉರ್ದುವಿನಲ್ಲಿ ಬರೆಯಲಾಗಿದೆ. ಭಾಷೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಮುಖ್ಯಶಿಕ್ಷಕಿ ರಪ್ತಾ ಖಾನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ(ಬಿಎಸ್‌ಎ) ಯೋಗೆಂದ್ರ ಕುಮಾರ್ ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕಿಯಿಸಿರುವ ಮುಖ್ಯಶಿಕ್ಷಕಿ ರಪ್ತಾ ಖಾನ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವು ಹಳೆಯದು. ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಗೆ ಪೇಂಟಿಗ್ ಮಾಡುವಾಗ ಉರ್ದುವಿನಲ್ಲಿದ್ದ ಹೆಸರನ್ನು ಅಳಿಸಲಾಗಿದೆ ಎಂದರು.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಿಎಸ್‌ಎ ಯೋಗೆಂದ್ರ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.