ADVERTISEMENT

ಈ ವರ್ಷ ದಾಖಲೆ ಸಂಖ್ಯೆಯ ವೀಸಾ ಪ್ರಕ್ರಿಯೆ ನಡೆಸಲು ಯೋಜನೆ: ಜಾನ್‌ ಬಲ್ಲಾರ್ಡ್‌

ಪಿಟಿಐ
Published 28 ಜನವರಿ 2023, 16:51 IST
Last Updated 28 ಜನವರಿ 2023, 16:51 IST

ನವದೆಹಲಿ: ‘ಅಮೆರಿಕ ರಾಯಭಾರ ಕಚೇರಿ ಹಾಗೂ ಭಾರತದಲ್ಲಿರುವ ಅದರ ಕಾನ್ಸುಲೇಟ್‌ಗಳು ಈ ವರ್ಷ ಭಾರತೀಯರಿಗೆ ಸಂಬಂಧಿಸಿದ ವೀಸಾ ಪ್ರಕ್ರಿಯೆಯನ್ನು ದಾಖಲೆ ಸಂಖ್ಯೆಯಲ್ಲಿ ನಡೆಸಲು ಯೋಜನೆ ಹೊಂದಿವೆ’ ಎಂದು ಮುಂಬೈ ಕಾನ್ಸುಲರ್‌ ಮುಖ್ಯಸ್ಥ ಜಾನ್‌ ಬಲ್ಲಾರ್ಡ್‌ ಶನಿವಾರ ಹೇಳಿದ್ದಾರೆ.

‘ಕಳೆದ ವರ್ಷ ರಾಯಭಾರ ಕಚೇರಿಯು ಭಾರತದ 1.25 ಲಕ್ಷ ಮಂದಿಗೆ ವಿದ್ಯಾರ್ಥಿ ವೀಸಾ ಮಂಜೂರು ಮಾಡಿತ್ತು. ಈ ಬಾರಿ ಇದಕ್ಕಿಂತಲೂ ಹೆಚ್ಚು ಮಂದಿ ವಿದ್ಯಾರ್ಥಿ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಒಟ್ಟು 8 ಲಕ್ಷಕ್ಕೂ ಅಧಿಕ ವೀಸಾ ವಿತರಿಸಲಾಗಿದೆ. ಕೋವಿಡ್‌ ಪೂರ್ವದಲ್ಲಿದ್ದ ಪರಿಸ್ಥಿತಿಗೆ ನಾವು ಮರಳುತ್ತಿದ್ದೇವೆ’ ಎಂದಿದ್ದಾರೆ.

‘ವೀಸಾ ನವೀಕರಣಕ್ಕಾಗಿ ಇನ್ನು ಮುಂದೆ ಅಭ್ಯರ್ಥಿಗಳು ಇ–ಮೇಲ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ವೀಸಾಗಾಗಿ ಕಾಯುವ ಅವಧಿಯನ್ನು ತಗ್ಗಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.