ADVERTISEMENT

ಉತ್ತರ ಪ್ರದೇಶ: ಮೇದಾಂತ ಆಸ್ಪತ್ರೆಯ ವೈದ್ಯ ಸೇರಿ 33 ಸಿಬ್ಬಂದಿಗೆ ಕೋವಿಡ್

ಪಿಟಿಐ
Published 4 ಜನವರಿ 2022, 9:45 IST
Last Updated 4 ಜನವರಿ 2022, 9:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಇಲ್ಲಿನ ಮೇದಾಂತ ಆಸ್ಪತ್ರೆಯ ವೈದ್ಯರು ಸೇರಿದಂತೆ ಒಟ್ಟು 33 ಸಿಬ್ಬಂದಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಆಸ್ಪತ್ರೆ ತಿಳಿಸಿದೆ.

33 ಸೋಂಕಿತರಲ್ಲಿ ಒಬ್ಬರು ತುರ್ತು ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಾಗಿದ್ದು, ಉಳಿದ 32 ಮಂದಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ. ಯಾರೊಬ್ಬರಿಗೂ ರೋಗದ ಲಕ್ಷಣಗಳಿಲ್ಲ.

'ಸೋಂಕಿತರಲ್ಲಿ ಹಲವರು ಮಾದರಿ ಸಂಗ್ರಹಕ್ಕೆ ಹೋಗಿದ್ದವರು. ಅವರಿಗೆ ಸೋಂಕು ದೃಢಪಡಲು ಅದೇ ಕಾರಣ' ಎಂದು ಮೇದಾಂತ ಆಸ್ಪತ್ರೆಯ ನಿರ್ದೇಶಕ, ಡಾ. ರಾಕೇಶ್ ಕಪೂರ್ ತಿಳಿಸಿದ್ದಾರೆ.

ADVERTISEMENT

'ಆಸ್ಪತ್ರೆಯ ಇತರ ಸಿಬ್ಬಂದಿಗೂ ಸೋಂಕು ಹರಡಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಾದರಿಗಳನ್ನು ಸಂಗ್ರಹಿಸಲಾಗಿದೆ' ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.