ADVERTISEMENT

ಪ್ರಧಾನಿ ರ‍್ಯಾಲಿ ರದ್ದು: ಬಿಜೆಪಿಗೆ ಮಾತ್ರ ಹವಾಮಾನ ಕೆಟ್ಟಿದೆ ಎಂದ ಚೌಧರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2022, 11:22 IST
Last Updated 7 ಫೆಬ್ರುವರಿ 2022, 11:22 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಲಖನೌ: ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಬೇಕಿದ್ದ ಬಿಜ್ನೋರ್‌ರ‍್ಯಾಲಿಯನ್ನು ರದ್ದುಗಳಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ. ಈ ವಿಚಾರವಾಗಿ ವ್ಯಂಗ್ಯವಾಡಿರುವ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್‌ ಚೌಧರಿ, ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕಷ್ಟವನ್ನು ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.

‘ಬಿಜ್ನೋರ್‌ನಲ್ಲಿ ಇಂದು ಬಿಸಿಲಿದೆ. ಆದರೆ, ಬಿಜೆಪಿಗೆ ಮಾತ್ರ ಹವಾಮಾನವು ಕೆಟ್ಟಿದೆ’ ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.

ಅವರು ತಮ್ಮ ಟ್ವೀಟ್‌ನೊಂದಿಗೆ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ರ‍್ಯಾಲಿಯು ರದ್ದಾಗಿದ್ದರ ಬಗೆಗಿನ ಸುದ್ದಿ ಮೊದಲನೆಯ ಚಿತ್ರದಲ್ಲಿದೆ. ಎರಡನೆಯದರಲ್ಲಿ, ಬಿಜ್ನೋರ್‌ ಹವಾಮಾನದ ಕುರಿತ ಗೂಗಲ್‌ ಸ್ಕ್ರೀನ್‌ಶಾಟ್‌ ಇದೆ. ಇದರಲ್ಲಿ ಬಿಜ್ನೋರ್‌ನ ತಾಪಮಾನವು 17 ಡಿಗ್ರಿ ಎಂದು ತೋರಿಸುತ್ತಿದೆ.

ADVERTISEMENT

ಉತ್ತರ ಪ್ರದೇಶದಲ್ಲಿ ಈ ತಿಂಗಳು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಸಮಾಜವಾದಿ ಪಕ್ಷದೊಂದಿಗೆ ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿದೆ. ರಾಷ್ಟ್ರೀಯ ಲೋಕದಳವು ಪಶ್ಚಿಮ ಯುಪಿಯಲ್ಲಿ ಪ್ರಾಬಲ್ಯ ಹೊಂದಿದೆ.

ಇದನ್ನೂ ಓದಿ: ತ್ರಿಪುರಾದ ಬಿಜೆಪಿಯ ಇಬ್ಬರು ಶಾಸಕರ ರಾಜೀನಾಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.