ADVERTISEMENT

ದಸರಾ ಸಂಭ್ರಮ: ಬರೇಲಿ ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತ, ಬಿಗಿ ಭದ್ರತೆ

ಪಿಟಿಐ
Published 2 ಅಕ್ಟೋಬರ್ 2025, 15:53 IST
Last Updated 2 ಅಕ್ಟೋಬರ್ 2025, 15:53 IST
ಭದ್ರತಾ ಸಿಬ್ಬಂದಿ ಬರೇಲಿಯ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿದರು – ಪಿಟಿಐ ಚಿತ್ರ
ಭದ್ರತಾ ಸಿಬ್ಬಂದಿ ಬರೇಲಿಯ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿದರು – ಪಿಟಿಐ ಚಿತ್ರ   

ಬರೇಲಿ: ಉತ್ತರ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ದಸರಾ ಕಾರಣಕ್ಕೆ ಗುರುವಾರ ಬಿಗಿಭದ್ರತೆ ಮಾಡಲಾಗಿತ್ತು. ಬರೇಲಿ ಜಿಲ್ಲೆಯಲ್ಲಿ 48 ಗಂಟೆ‌ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ.

ಗುರುವಾರ ಮಧ್ಯಾಹ್ನ 3ರಿಂದ ಶನಿವಾರ ಮಧ್ಯಾಹ್ನ 3ರವರೆಗೆ ಮೊಬೈಲ್ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್‌ ಮತ್ತು ಎಸ್‌ಎಂಎಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಗೃಹಇಲಾಖೆ ಅಧಿಸೂಚನೆ ಹೊರಡಿಸಿದೆ. 

ಸಾಮಾಜಿಕ ಜಾಲತಾಣಗಳಿಂದ ಹಬ್ಬುವ ಸುಳ್ಳುಸುದ್ದಿಗಳಿಂದಾಗಿ ಕೋಮು ಸಂಘರ್ಷಗಳು ನಡೆಯುವ ಸಾಧ್ಯತೆ ಇರುವುದರಿಂದ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಕಾರ್ಯದರ್ಶಿ ಗೌರವ್‌ ದಯಾಳ್‌ ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.