ADVERTISEMENT

ಉತ್ತರಪ್ರದೇಶ: ಮುಖ್ತಾರ್ ಅನ್ಸಾರಿ ಆಪ್ತರಿಗೆ ಸೇರಿದ ಮನೆಗಳು ನೆಲಸಮ

ಪಿಟಿಐ
Published 7 ಮಾರ್ಚ್ 2023, 12:21 IST
Last Updated 7 ಮಾರ್ಚ್ 2023, 12:21 IST
   

ಲಖನೌ: ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಮಾಜಿ ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಆಪ್ತರಿಗೆ ಸೇರಿದ ಎರಡು ಮನೆಗಳನ್ನು ಉರುಳಿಸಲಾಗಿದೆ.

ಆಪ್ತರು, ಅನ್ಸಾರಿ ಅವರಿಗೆ ವಾಹನಗಳು ಸೇರಿದಂತೆ ಇತರೆ ನೆರವು ನೀಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬಂದಾ ಜಿಲ್ಲೆಯಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ರಫೀಕ್ ಉಸ್ಮಾದ್ ಮತ್ತು ಇಫ್ತಿಕಾರ್ ಎಂಬವರ ಮನೆಗಳನ್ನು ಉರುಳಿಸಲಾಗಿದೆ. ಈ ಇಬ್ಬರೂ ಅನ್ಸಾರಿಗೆ ವಾಹನಗಳು ಮತ್ತಿತರ ನೆರವು ನೀಡುತ್ತಿದ್ದರು’ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಮನೆಗಳಿಂದ ಎರಡು ಡಬಲ್ ಬ್ಯಾರಲ್ ಗನ್ ಮತ್ತು ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಫೀಕ್ ಉಸ್ಮಾದ್ ಮನೆಯಿಂದ ₹7 ಲಕ್ಷ ಹಣವನ್ನೂ ವಶಕ್ಕೆ ಪಡೆಯಲಾಗಿದೆ.

ADVERTISEMENT

ಪರವಾನಗಿ ಮಿತಿಗಿಂತ ಅಧಿಕ ಪ್ರಮಾಣದ ಕಾಟ್ರಿಡ್ಜ್ ಹೊಂದಿದ್ದ ಹಿನ್ನೆಲೆಯಲ್ಲಿ ಗನ್ ಪರವಾನಗಿ ರದ್ದಿಗೂ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಜಿಪುರದಲ್ಲಿ ಅನ್ಸಾರಿಯ ಮತ್ತೊಬ್ಬ ಆಪ್ತ ಕಮಲೇಶ್ ಸಿಂಗ್ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಭಾನುವಾರ ಕೆಡವಲಾಗಿತ್ತು.

ಅನ್ಸಾರಿ ಮಕ್ಕಳಾದ ಅಬ್ಬಾಸ್ ಮತ್ತು ಉಮರ್ ಅನ್ಸಾರಿ, ಮೌ ಜಿಲ್ಲೆಯ ಜಹಾಂಗಿರಾಬಾದ್‌ನಲ್ಲಿ ಕಟ್ಟಿದ್ದ ಎರಡು ಅಂತಸ್ತಿನ ಕಟ್ಟಡವನ್ನು ಉರುಳಿಸಲಾಗಿದೆ.

ಸದ್ಯ, ಬಂದಾ ಜೈಲಿನಲ್ಲಿರುವ ಅನ್ಸಾರಿ, ಅವರ ಮಗ ಸುಹೇಲ್‌ ದೇವ್ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ್ ಅನ್ಸಾರಿ ಸಹ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಸ್‌ಗಂಜ್ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.