ADVERTISEMENT

ಉತ್ತರ ಪ್ರದೇಶದಲ್ಲಿ 14 ಪ್ರವಾಸಿ ಸರ್ಕ್ಯೂಟ್ ಅಭಿವೃದ್ಧಿ: ಪ್ರವಾಸೋದ್ಯಮ ಸಚಿವ

ಪಿಟಿಐ
Published 7 ಮೇ 2022, 3:45 IST
Last Updated 7 ಮೇ 2022, 3:45 IST
ಮಥುರಾ
ಮಥುರಾ   

ಮಥುರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 14 ಪ್ರವಾಸಿ ಸರ್ಕ್ಯೂಟ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದುಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಯವೀರ್‌ ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

ನಾಲ್ಕು ದಿನಗಳ 'ಅಮೃತ ಸಂಗೀತ ಉತ್ಸವ'ಕ್ಕೆ ಚಾಲನೆ ನೀಡಿದ ಜಯವೀರ್‌ ಅವರು,14 ಸರ್ಕ್ಯೂಟ್‌ಗಳಪೈಕಿ ಒಂದನ್ನು ಹುತಾತ್ಮರಿಗೆ ಸಮರ್ಪಿಸಲಾಗುವುದು. ಕೃಷ್ಣ ಜನ್ಮಸ್ಥಳವಾದಬ್ರಜ್ ಭೂಮಿಯನ್ನು,ಪ್ರಾಚೀನ ಸಂಸ್ಕೃತಿಯನ್ನು ಸಾರುವ ಹೊಸ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

ರಾಜ್ಯ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಪಡಿಸಲಿದ್ದು, ಜನರ ಸಹಕಾರದೊಂದಿಗೆ ಮಥುರಾಗೆ ಹೊಸ ರೂಪ ನೀಡಲಿದೆ ಎಂದೂ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.