ADVERTISEMENT

ಯುಟ್ಯೂಬ್ ವಾಹಿನಿಗೆ ಸಂದರ್ಶನ ನೀಡುವಂತೆ ಪೊಲೀಸ್ ಅಧಿಕಾರಿಗೆ ಯೂಟ್ಯೂಬರ್ ಬೆದರಿಕೆ!

ಆರೋಪಿ ಬಂಧನ

ಪಿಟಿಐ
Published 24 ಡಿಸೆಂಬರ್ 2024, 9:29 IST
Last Updated 24 ಡಿಸೆಂಬರ್ 2024, 9:29 IST
ಯೂಟ್ಯೂಬ್
ಯೂಟ್ಯೂಬ್    

ಸಂಭಲ್: ತನ್ನ ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಲು ನಿರಾಕರಿಸಿದ ಪೊಲೀಸ್ ಅಧಿಕಾರಿಗೆ ಯೂಟ್ಯೂಬರ್ ಒಬ್ಬ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.

ಬೆದರಿಕೆ ಹಾಕಿರುವ ಮಶಕೂರ್ ರಾಜಾ ದಾದಾ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ನವೆಂಬರ್ 24 ರಂದು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದ್ದ ಕೋಮು ಗಲಭೆಯ ಬಗ್ಗೆ ಸಂಭಲ್ನ ಚಂದೌಸಿ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಸಂಜು ಕುಮಾರ್ ಚೌಧರಿ ಅವರಿಗೆ ಸಂದರ್ಶನ ನೀಡಲು ಆರೋಪಿ ಒತ್ತಾಯಿಸುತ್ತಿದ್ದ.

ADVERTISEMENT

ಪೊಲೀಸ್ ಅಧಿಕಾರಿಯು ಸಂದರ್ಶನ ನೀಡಲು ಒಪ್ಪದಿದ್ದಾಗ ಆರೋಪಿ, ‘ನಾನು ಹೇಳಿದರೆ ಡಿಜಿಪಿ, ಸಿಎಂ ಬಂದು ಸಂದರ್ಶನ ಕೊಡುತ್ತಾರೆ. ಒಲ್ಲೆ ಎನ್ನಲು ನೀನಾರು, ನೋಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದ.

ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡಿರುವ ಯೂಟ್ಯೂಬರ್, ಪೊಲೀಸ್ ಅಧಿಕಾರಿಯ ಸಂದರ್ಶನ ಮಾಡಿ ದೇಶದಾದ್ಯಂತ ಪ್ರಚಾರ ಪಡೆಯುತ್ತೇನೆ ಎಂದು ಹೇಳಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಸಂಭಲ್‌ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ನವೆಂಬರ್‌ 24ರಂದು ಸಮೀಕ್ಷೆ ನಡೆಸಲು ಮುಂದಾದಾಗ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.