ADVERTISEMENT

₹1.54 ಕೋಟಿ ವೇತನದ ಉದ್ಯೋಗ ಭಾಗ್ಯ

ಪಿಟಿಐ
Published 2 ಡಿಸೆಂಬರ್ 2019, 17:29 IST
Last Updated 2 ಡಿಸೆಂಬರ್ 2019, 17:29 IST

ರೂರ್ಕಿ, ಉತ್ತರಾಖಂಡ: ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ– ಆರ್‌) ಮೂವರು ವಿದ್ಯಾರ್ಥಿಗಳಿಗೆ ಅಮೆರಿಕದ ಬಹುರಾಷ್ಟ್ರೀಯ ಕಂಪನಿಯೊಂದು ವರ್ಷಕ್ಕೆ ತಲಾ ₹1.54 ಕೋಟಿ ವೇತನ ನಿಗದಿಪಡಿಸಿ ಉದ್ಯೋಗದ ಆಹ್ವಾನ ನೀಡಿದೆ.

ಇಷ್ಟು ದೊಡ್ಡ ಪ್ರಮಾಣದ ವೇತನದೊಂದಿಗೆ ಉದ್ಯೋಗ ನೀಡಿರುವುದು ಇದೇ ಮೊದಲು ಎಂದು ಸಂಸ್ಥೆಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಕಂಪ್ಯೂಟರ್‌ ವಿಜ್ಞಾನ, ಎಲೆಕ್ಟ್ರಾನಿಕ್ಸ್‌ ಮತ್ತು ಭೌತ ವಿಜ್ಞಾನ ಎಂಜಿನಿಯರಿಂಗ್‌ ವಿಭಾಗದ ಬಿ.ಟೆಕ್‌ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಭಾನುವಾರದಿಂದ ಆರಂಭವಾದ ಕ್ಯಾಂಪಸ್‌ ಸಂದರ್ಶನದಲ್ಲಿ ಈ ಉದ್ಯೋಗ ದೊರೆತಿದೆ. ದೇಶಿಯ ಕಂಪನಿಯೊಂದರಲ್ಲಿ ವರ್ಷಕ್ಕೆ ₹62 ಲಕ್ಷ ವೇತನಕ್ಕೆ ಮತ್ತೊಬ್ಬ ವಿದ್ಯಾರ್ಥಿಗೆ ಉದ್ಯೋಗದ ಆಹ್ವಾನ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕ್ಯಾಂಪಸ್‌ ಸಂದರ್ಶನದಲ್ಲಿ 30 ಕಂಪನಿಗಳು ಭಾಗವಹಿಸಿವೆ. ಮೊದಲನೇ ಹಂತದಲ್ಲಿ 363 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ಪೈಕಿ 322 ವಿದ್ಯಾರ್ಥಿಗಳಿಗೆ ಉದ್ಯೋಗದ ಆಹ್ವಾನ ದೊರೆತಿದೆ. ಡಿಸೆಂಬರ್‌ 15ರ ವರೆಗೆ ಈ ಸಂದರ್ಶನ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.