ADVERTISEMENT

ಉತ್ತರಕಾಶಿ: ಪ್ರತಿಕೂಲ ಹವಾಮಾನ, ಶೋಧ ಕಾರ್ಯಾಚರಣೆಗೆ ಅಡ್ಡಿ

ಪಿಟಿಐ
Published 8 ಅಕ್ಟೋಬರ್ 2022, 10:31 IST
Last Updated 8 ಅಕ್ಟೋಬರ್ 2022, 10:31 IST
ಪರ್ವತಾರೋಹಿಯೊಬ್ಬರ ಮೃತದೇಹವನ್ನು ಹೆಲಿಕಾಪ್ಟರ್‌ ಮೂಲಕ ತರಲಾಯಿತು–ಪಿಟಿಐ ಚಿತ್ರ
ಪರ್ವತಾರೋಹಿಯೊಬ್ಬರ ಮೃತದೇಹವನ್ನು ಹೆಲಿಕಾಪ್ಟರ್‌ ಮೂಲಕ ತರಲಾಯಿತು–ಪಿಟಿಐ ಚಿತ್ರ   

ಉತ್ತರಕಾಶಿ: ದ್ರೌಪದಿ ಕಾ ದಂಡ ಶಿಖರದಲ್ಲಿ ಪ್ರತಿಕೂಲ ಹವಾಮಾನ ಸೃಷ್ಟಿಯಾಗಿರುವುದರಿಂದ ನಾಪತ್ತೆಯಾಗಿರುವ ಪರ್ವತಾರೋಹಿಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಶಿಖರದಲ್ಲಿ ಈಚೆಗೆ ಹಿಮಪಾತ ಸಂಭವಿಸಿದ ಪರಿಣಾಮ ನೆಹರೂ ಪರ್ವತಾರೋಹಣ ಸಂಸ್ಥೆಯ (ಎನ್‌ಐಎಂ) 29 ಮಂದಿ ಪರ್ವತಾರೋಹಿಗಳು ನಾಪತ್ತೆಯಾಗಿದ್ದರು. ಇವರಲ್ಲಿ 26 ಮಂದಿಯ ಮೃತದೇಹಗಳು ಪತ್ತೆಯಾಗಿವೆ.

ದ್ರೌಪದಿ ಕಾ ದಂಡ ಶಿಖರದಲ್ಲಿ ಭಾರಿ ಹಿಮಪಾತವಾಗುತ್ತಿರುವ ಕಾರಣ ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ದೇವೇಂದ್ರ ಪಟ್ವಾಲ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.