ADVERTISEMENT

ವೈಷ್ಣೋದೇವಿ ದರ್ಶನಕ್ಕೆ ‘ವಂದೇ ಭಾರತ್’

ದೆಹಲಿ–ಕಾಶ್ಮೀರದ ಮಧ್ಯೆ ಸಂಪರ್ಕ ಬೆಸೆಯುವ ರೈಲು

ಪಿಟಿಐ
Published 4 ಅಕ್ಟೋಬರ್ 2019, 5:14 IST
Last Updated 4 ಅಕ್ಟೋಬರ್ 2019, 5:14 IST
ವಂದೇ ಭಾರತ್ ರೈಲು
ವಂದೇ ಭಾರತ್ ರೈಲು   

ನವದೆಹಲಿ: ದೆಹಲಿ ಮತ್ತು ಜಮ್ಮು ಕಾಶ್ಮೀರದ ಕತ್ರಾ ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ಇಲ್ಲಿ ಚಾಲನೆ ನೀಡಿದರು. ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಹರ್ಷವರ್ಧನ್ ಹಾಗೂ ಜಿತೇಂದ್ರ ಸಿಂಗ್ ಹಾಜರಿದ್ದರು.

ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿ ರುವ ಈ ರೈಲು ಮಾತಾ ವೈಷ್ಣೋದೇವಿ ಭಕ್ತರಿಗೆ ಹೆಚ್ಚು ಉಪಯುಕ್ತವಾಗಲಿದೆ.ಅಕ್ಟೋಬರ್ 5ರಿಂದ ರೈಲಿನ ಸಂಚಾರ ಆರಂಭವಾಗಲಿದೆ. ಮಂಗಳವಾರ ಬಿಟ್ಟು ವಾರದ ಎಲ್ಲ ದಿನ ಓಡಲಿದೆ.

ವಂದೇ ಭಾರತ್ ಸರಣಿಯ ಎರಡನೇ ರೈಲು ಇದಾಗಿದ್ದು, ಮೊದಲ ರೈಲು ದೆಹಲಿ–ವಾರಾಣಸಿ ಮಧ್ಯೆ ಚಲಿಸುತ್ತಿದೆ.ಆಗಸ್ಟ್ 15, 2022ರ ವೇಳಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ದೇಶವನ್ನು ರೈಲ್ವೆ ಜಾಲ ಬೆಸೆಯಲಿದೆ ಎಂದು ರೈಲ್ವೆ ಸಚಿವ ಗೋಯಲ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.