ADVERTISEMENT

ಟಿಡಿಪಿ ನಾಯಕ ಯದ್ಲಪತಿ ವೆಂಕಟ ರಾವ್‌ ನಿಧನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 12:12 IST
Last Updated 28 ಫೆಬ್ರುವರಿ 2022, 12:12 IST
ಯದ್ಲಪತಿ ವೆಂಕಟ ರಾವ್‌
ಯದ್ಲಪತಿ ವೆಂಕಟ ರಾವ್‌    

ಅಮರಾವತಿ: ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡ ಯದ್ಲಪತಿ ವೆಂಕಟ ರಾವ್‌ ಹೈದರಾಬಾದ್‌ನಲ್ಲಿ ಸೋಮವಾರ ನಿಧನರಾದರು.

ಅವರಿಗೆ 102 ವರ್ಷ ವಯಸ್ಸಾಗಿತ್ತು. ಹೈದರಾಬಾದ್‌ನಲ್ಲಿರುವ ಅವರ ಪುತ್ರಿಯ ಮನೆಯಲ್ಲಿ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ವೆಂಕಟರಾವ್ ಅವರು 1967 ರಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ಸದಸ್ಯರಾಗುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು. ದಿವಂಗತ ಮಾಜಿ ಮುಖ್ಯಮಂತ್ರಿ ಮರಿ ಚನ್ನಾ ರೆಡ್ಡಿ ಅವರ ಸಂಪುಟದಲ್ಲಿ 1978 ರಿಂದ 1980ರ ವರೆಗೆ ಸಚಿವರಾಗಿದ್ದರು.

ADVERTISEMENT

1983ರಲ್ಲಿ ಟಿಡಿಪಿ ಸೇರ್ಪಡೆಯಾಗಿದ್ದ ಅವರು, 1998ರಲ್ಲಿ ರಾಜ್ಯಸಭೆಯ ಸದಸ್ಯರಾಗಿದ್ದರು. ರಾಜಕೀಯ ಕ್ಷೇತ್ರದ ಹಿರಿಯ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು, ಅನೇಕ ನಾಯಕರಿಗೆ ರಾಜಕೀಯ ಗುರುವಾಗಿದ್ದರು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ವೆಂಕರಾವ್‌ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.