ADVERTISEMENT

ಬ್ಯಾಂಕ್‌ಗಳ ಇಬ್ಬಗೆ ನೀತಿ: ಮಲ್ಯ ಟೀಕೆ

ಪಿಟಿಐ
Published 26 ಮಾರ್ಚ್ 2019, 19:37 IST
Last Updated 26 ಮಾರ್ಚ್ 2019, 19:37 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ನವದೆಹಲಿ: ‘ಎನ್‌ಡಿಎ ಅಧಿಕಾರಾವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಇಬ್ಬಗೆ ನೀತಿ ಅನುಸರಿಸುತ್ತಿವೆ’ ಎಂದು ದೇಶಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಟೀಕಿಸಿದ್ದಾರೆ.

‘ಎನ್‌ಡಿಎ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಬ್ಯಾಂಕ್‌ಗಳು ಜೆಟ್‌ ಏರ್‌ವೇಸ್‌ಗೆ ಬಂಡವಾಳ ನೆರವು ಘೋಷಿಸಿವೆ. ಆದರೆ, ಇದೇ ಬ್ಯಾಂಕ್‌ಗಳು ಕಿಂಗ್‌ಫಿಷರ್‌ ಸಂಸ್ಥೆಯ ವಿಷಯದಲ್ಲಿ ಮಾತ್ರ ನಿರ್ದಯವಾಗಿ ನಡೆದುಕೊಂಡವು.ಹಾಗಾಗಿ ಸಂಸ್ಥೆಯನ್ನು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಟ್‌ ಏರ್‌ವೇಸ್‌ ಬೆಳವಣಿಗೆಯ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ADVERTISEMENT

‘ಕಿಂಗ್‌ಫಿಷರ್‌ ಸಂಸ್ಥೆ ಮತ್ತು ಸಿಬ್ಬಂದಿಯನ್ನು ಉಳಿಸಿಕೊಳ್ಳಲು ₹ 4 ಸಾವಿರ ಕೋಟಿಗೂ ಅಧಿಕ ಮೊತ್ತ ಹೂಡಿಕೆ ಮಾಡಿದೆ. ಆದರೆ,ಯಾರೊಬ್ಬರೂ ನನ್ನನ್ನು ಗುರುತಿಸಲಿಲ್ಲ. ಎಲ್ಲಾ ವಿಧದಲ್ಲಿಯೂ ನನ್ನ ವಿರುದ್ಧ ಟೀಕಿಸಿದರು’ ಎಂದು ಅಸಮಾಧಾನ ತೋಡಿಕೊಂಡರು.

ನನ್ನ ಹಣ ಬಳಸಿ:ನಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ ಸಂಸ್ಥೆಯನ್ನು ಉಳಿಸಿಕೊಳ್ಳಲು ತನ್ನ ಹಣ ಬಳಸುವಂತೆ ಮಲ್ಯ ಬ್ಯಾಂಕ್‌ಗಳಿಗೆ ಹೇಳಿದ್ದಾರೆ.

‘ಬ್ಯಾಂಕ್‌ಗಳು ಮತ್ತು ಇತರೆ ಸಾಲಗಳನ್ನು ತೀರಿಸಲು ನನ್ನ ಆಸ್ತಿಗಳನ್ನು ನೀಡಲು ಸಿದ್ಧವಿರುವುದಾಗಿ ಕರ್ನಾಟಕ ಹೈ ಕೋರ್ಟ್‌ ಮುಂದೆ ಹೇಳಿದ್ದೇನೆ. ಹೀಗಿದ್ದರೂ ಬ್ಯಾಂಕ್‌ಗಳು ಏಕೆ ನನ್ನ ಹಣ ತೆಗೆದುಕೊಳ್ಳುತ್ತಿಲ್ಲ. ಜೆಟ್‌ ಏರ್‌ವೇಸ್‌ ಸಂಸ್ಥೆಯನ್ನು ಉಳಿಸಿಕೊಳ್ಳಲು ಈ ಹಣ ನೆರವಾಗುತ್ತಿತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.