ADVERTISEMENT

ಸಂದರ್ಶಕರಿಗೆ ಕಾಡಿದ 'ಅಮರ್ ಜವಾನ್ ಜ್ಯೋತಿ' ಅನುಪಸ್ಥಿತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 15:32 IST
Last Updated 10 ಸೆಪ್ಟೆಂಬರ್ 2022, 15:32 IST
   

ನವದೆಹಲಿ: ಇಂಡಿಯಾ ಗೇಟ್‌ನಲ್ಲಿನ ‘ಅಮರ್ ಜವಾನ್ ಜ್ಯೋತಿ’ ಅನುಪಸ್ಥಿತಿ ಎದ್ದು ಕಾಣುತ್ತಿದೆ ಎಂದು ಇಲ್ಲಿನ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಶಕರು ಹೇಳಿದರು.

ರೈಸಿನಾ ಹಿಲ್ ಕಾಂಪ್ಲೆಕ್ಸ್‌ನಿಂದ ಇಂಡಿಯಾ ಗೇಟ್‌ವರೆಗೆಪುನರ್ ಅಭಿವೃದ್ಧಿಪ‍ಡಿಸಿದ ಮತ್ತು ಹೆಸರು ಬದಲಿಸಲಾದ ಕರ್ತವ್ಯಪಥ ಮತ್ತು ಅವುಗಳ ಸುತ್ತಲಿನ ಹಸಿರು ಹುಲ್ಲುಹಾಸುಗಳನ್ನು ಎರಡು ವರ್ಷಗಳ ನಂತರ ಶುಕ್ರವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.

ಕರ್ತವ್ಯ ಪಥ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಜನರು ಇಲ್ಲಿಗೆ ಭೇಟಿ ನೀಡಿ, ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವಂತೆ ಹೇಳಿದ್ದರು.

ADVERTISEMENT

ಸ್ಮಾರಕಕ್ಕೆ ಭೇಟಿ ನೀಡಿದ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಸೆಲ್ಫಿ ಮತ್ತು ಚಿತ್ರಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡು ಬಂತು. ಇನ್‌ಸ್ಟ್ರಗ್ರಾಮ್‌ ರೀಲ್ಸ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಮತ್ತೆ ಕೆಲವರು 90 ವರ್ಷಕ್ಕೂ ಹೆಚ್ಚು ಹಳೆಯ ಸ್ಮಾರಕದ ಕಮಾನುಗಳ ಮುಂದೆ ನಿಂತು ಫೋಸ್ ನೀಡಿದರು.

‘ಬಾಲ್ಯದ ದಿನಗಳಿಂದ ಭೌತಿಕವಾಗಿ, ದೂರದರ್ಶನ ಅಥವಾ ಚಲನಚಿತ್ರಗಳಲ್ಲಿ ಮಿನುಗುವುದನ್ನು ನೋಡಿದ್ದಅಮರ್ ಜವಾನ್ ಜ್ಯೋತಿ ಅನುಪಸ್ಥಿತಿ ಈಗ ಎದ್ದು ಕಾಣುತ್ತದೆ’ ಎಂದು ಶುಕ್ರವಾರ ಸಂಜೆ ಘಾಜಿಯಾಬಾದ್ ಸ್ಮಾರಕಕ್ಕೆ ಭೇಟಿ ನೀಡಿದಗ್ರಾಫಿಕ್ ಡಿಸೈನರ್ ಮನೀಶ್ ಭಂಡಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.